ಉತ್ತರ ಕರ್ನಾಟಕದ 65 ಸ್ಥಾನಗಳಲ್ಲಿ ಜಯ : ಇಬ್ರಾಹಿಂ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಹಾಗೂ ಮುಸ್ಲಿಮರು ಒಂದಾಗುವ ಮೂಲಕ 2023 ರ ಚುನಾವಣೆಯಲ್ಲಿ ಖಂಡಿತ 65 ಸ್ಥಾನಗಳಲ್ಲಿ ಪಕ್ಷ ಜಯಗಳಿಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅಭಿಪ್ರಾಯವ್ಯಕ್ತಪಡಿಸಿದರು..!

ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮುನ್ನ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಜೆಡಿಎಸ್ ದಿನದಿಂದ ದಿನಕ್ಕೆ ಶಕ್ತಿಶಾಲಿಯಾಗುತ್ತಿದೆ. 1994 ರಲ್ಲಿದ್ದ ಜೆಡಿಎಸ್ ರಾಜಕೀಯ ಸ್ಥಿತಿ ಮತ್ತೇ ರಾಜ್ಯದಲ್ಲಿ ನಿರ್ಮಾಣವಾಗಿದೆ. 2023 ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಕೊಪ್ಪಳದಲ್ಲಿ ಅಮೂಲಾಗ್ರ ಬದಲಾವಣೆ : ಉತ್ತರ ಕರ್ನಾಟಕ ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ವಿಶೇಷವಾಗಿ ನವೆಂಬರ್ ವೇಳೆಗಾಗಲೇ ಜೆಡಿಎಸ್ ಪಕ್ಷ ಅಮೂಲಾಗ್ರ ಬದಲಾವಣೆ ಕಾಣಲಿದೆ. ಕಾದು ನೋಡ್ರೀ.. ಎಂದು ತಿಳಿಸುವ ಮೂಲಕ ಕೊಪ್ಪಳ ಸೇರಿದಂತೆ ಕುಷ್ಟಗಿ, ಕನಕಗಿರಿ ಹಾಗೂ ಗಂಗಾವತಿ ಕ್ಷೇತ್ರಗಳಲ್ಲಿ ವಿಶಿಷ್ಟ ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷ ಘೋಷಿಸಲಿದೆ ಎಂದರು..!!