ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಬೂದಗುಂಪ ಕ್ರಾಸ್ ಹೊರವಲಯದಲ್ಲಿ ಕುರಿಹಟ್ಟಿ ಹಾಕಿದ್ದ ನಾಗಪ್ಪ ಸಂಗಟಿ ಎಂಬ ಕುರಿಗಾಹಿಯನ್ನು ಹಿಗ್ಗಾ ಮುಗ್ಗಾ ತಳಿಸುವುದು ಅಲ್ಲದೆ, ಕೈ ಕಾಲು ಕಟ್ಟಿ ಹಾಕಿ ಕುರಿಗಳನ್ನು ಕಳ್ಳತನ ಮಾಡಿದ್ದ ಯಾದಗಿರಿ ಮೂಲದ ನಾಲ್ಕು ಜನ ಕಳ್ಳರ ಪೈಕಿ ಮೋತಿರಾಮ್ ಎಂಬುವವನನ್ನು ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ..!
ಸೆ.18 ರಂದು ಯಾದಗಿರಿ ಮೂಲದ ಕುರಿ ದರೋಡೆಕೋರರು ಬೂದುಗುಂಪ ಕ್ರಾಸ್ ಬಳಿ ಈ ಕೃತ್ಯ ಎಸಗಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಕುರಿತು ವಿಶೇಷ ಆಸಕ್ತಿ ವಹಿಸಿದ ಕೊಪ್ಪಳ ಗ್ರಾಮೀಣ ಸಿಪಿಐ ವಿಶ್ವನಾಥ್ ಹಿರೇಗೌಡರ ಅವರು ವಂಚಕರಿಗೆ ಬಲೆ ಬೀಸಿದ್ದರು.
ಅಮಾಯಕ ಕುರಿಗಾರರ ಮೇಲೆ ದೌರ್ಜನ್ಯ :
ಮುಗ್ಧ ಹಾಗೂ ಅಮಾಯಕ ಕುರಿಗಾಹಿಗಳ ಮೇಲೆ ಈ ರೀತಿಯ ದೌರ್ಜನ್ಯಗಳು ಹಾಗೂ ವಂಚನೆಗಳು ಆಗಾಗ ಜರುಗುತ್ತಲೇ ಇರುತ್ತವೆ. ಅದರಲ್ಲೂ ಅಲೆಮಾರಿ ಕುರಿಗಾರರ ಮೇಲೆ ದರೋಡೆಕೋರರು ಅಟ್ಟಹಾಸ ಮೆರೆಯುವುದು ಇನ್ನೂ ಹೆಚ್ಚು. ಕೆಲವು ಕುರಿಗಾರರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಹೆಚ್ಚಾಗಿ ಕುರಿಗಾರರು ಅನಕ್ಷರಸ್ಥರಾಗಿರುವುದರಿಂದ ತಮ್ಮ ಮೇಲೆ ದೌರ್ಜನ್ಯ ನಡೆದಾಗಲೂ ಯಾವುದೇ ದೂರು ನೀಡಲು ಮುಂದಾಗದಿರುವುದು ಕಳ್ಳರಿಗೆ ವರದಾನವಾಗಿದೆ.
ಆದರೆ, ಈ ವಿಷಯದಲ್ಲಿ ಆಸಕ್ತಿವಹಿಸಿ ದೂರು ದಾಖಲಿಸಲು ಸಲಹೆ ನೀಡಿದ ಸೀಮಣ್ಣ ಗಬ್ಬೂರು ಅವರಿಗೆ ಹಾಗೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದರೋಡೆಕೋರರನ್ನು ಬೇಟೆಯಾಡಿದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಹಿರಿಯ ಅಧಿಕಾರಿ ವಿಶ್ವನಾಥ್ ಹಿರೇಗೌಡರ್ ಅವರಿಗೆ ಅಭಿನಂದನೆಗಳನ್ನು ಹೇಳಲೇ ಬೇಕು. ಅಲ್ಲದೇ ನಮ್ಮದೊಂದು ಸಲಾಂ..!!
ಸುದ್ದಿ ಕೃಪೆ : ಕುಬೇರ ಮಜ್ಜಿಗಿ