ಶ್ರೀ ಚನ್ನವೀರ ಶರಣರ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸೇರಿದಂತೆ ಮೂವರು ಶಿಕ್ಷಕರಿಗೆ ಗೌರವ ಪ್ರಶಸ್ತಿ ಪ್ರದಾನ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಗದಗ (ಕೊಪ್ಪಳ) : ಧಾರವಾಡದ ಡಾ.ಎಚ್.ಎಫ್ ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಹಾಗೂ ಅಪರ ಆಯುಕ್ತರ ಕಛೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಇವರು 2022 ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಆರು ವಿಷಯಗಳಲ್ಲಿ ವರ್ಗ ಸರಾಸರಿಯಲ್ಲಿ ಹೆಚ್ಚು ಅಂಕ ಪಡೆದು, ಸಾಧನೆಗೆ ಕಾರಣರಾದ ಪ್ರತಿ ತಾಲೂಕಿನಿಂದ ಆರು ಜನ ವಿಷಯ ಶಿಕ್ಷಕರಿಗೆ ಇಂದು ಗದಗ ಶಹರದ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿತು..!

ಗದಗ ತಾಲೂಕ ಗ್ರಾಮೀಣ ವಿಭಾಗದಿಂದ ಆಯ್ಕೆಯಾದ 6 ಜನ ವಿಷಯ ಶಿಕ್ಷಕರಲ್ಲಿ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಪ್ರೌಢ ಶಾಲೆಯ 4 ಜನ ವಿಷಯ ಶಿಕ್ಷಕರು ಆಯ್ಕೆಯಾಗಿದ್ದು ವಿಶೇಷ. ಕನ್ನಡ ವಿಷಯದಲ್ಲಿ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಕುಂಬಾರ, ಗಣಿತದ ಜಿ.ಎಸ್.ಚನ್ನಪ್ಪಗೌಡರ,
ವಿಜ್ಞಾನದ ಎಸ್ ಇ ಹಿರೇಮಠ ಹಾಗೂ
ಸಮಾಜದ ಎಸ್ ವಿ ಗೌರಿಪುರ ಶಿಕ್ಷಕರುಗಳು
‘ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ಶಿಕ್ಷಕ’ ಪ್ರಶಸ್ತಿಗೆ ಆಯ್ಕೆಯಾದವರನ್ನು ಇಂದು ವೇದಿಕೆಯಲ್ಲಿ ಸನ್ಮಾನಿಸಿ ಸತ್ಕರಿಸಲಾಗಿತು. ಸತತ ಎರಡು ವರ್ಷಗಳ ಕಾಲ ಇದೇ ಬಳಗಾನೂರ ಶಾಲೆಯ ನಾಲ್ಕು ಜನ ಶಿಕ್ಷಕರು ಆಯ್ಕೆ ಆಗುತ್ತಿರುವುದು ಶಾಲೆಯ ಮೌಲ್ಯಯುತ ಶಿಕ್ಷಣ ವ್ಯವಸ್ಥೆಗೆ ಸಾಕ್ಷಿಯಾಗಿದೆ. ಶಿಕ್ಷಕರ ಶ್ರಮದಿಂದಾಗಿ ಕಳೆದ ವರ್ಷ ಶಾಲೆಯ ಫಲಿತಾಂಶ ಶೇಕಡಾ 100 % ಆಗಿದ್ದು ಒಟ್ಟು 57 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 31 ವಿದ್ಯಾರ್ಥಿಗಳು Distinction ನಲ್ಲಿ ತೆರ್ಗಡೆಯಾಗಿರುತ್ತಾರೆ.
ಉಪ ನಿರ್ದೇಶಕ ಜಿ.ಬಸಲಿಂಗಪ್ಪ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಎಸ್ ಡಿ ಗಾಂಜಿ, ನಿವೃತ್ತ ಉಪ ನಿರ್ದೇಶಕ ಎ.ಎನ್ ನಾಗರಳ್ಳಿ, ಪ್ರತಿಷ್ಠಾನದ ಗೌರವ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿದಂತೆ, ಇನ್ನಿತರ ಮಹನೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ‌ ಅಧ್ಯಕ್ಷರು, ಗೌರವ ಕಾರ್ಯದರ್ಶಿಗಳು, ಸಲಹಾ ಸಮಿತಿಯ ಸರ್ವ ಸದಸ್ಯರು, ಸಂಸ್ಥೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ..!