ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹೂಗಾರ ಮಾದಯ್ಯ ಜಯಂತಿ ಅಂಗವಾಗಿ ಜಿಲ್ಲೆಯ ಕುಷ್ಟಗಿ ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಜರುಗಿತು..!
ಸಭೆಯಲ್ಲಿ ಹೂಗಾರ ಮಾದಯ್ಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ತಿರ್ಮಾನಿಸಲಾಗಿತು. ಭಾವಚಿತ್ರ ಮೆರವಣಿಗೆ ಸೇರಿದಂತೆ ವೈಭವದ ಸಮಾರಂಭ ಏರ್ಪಾಡು ಮಾಡುವುದರ ಕುರಿತು ಹೂಗಾರ ಸಮುದಾಯದ ಹಿರಿಯ ಮುಖಂಡರು ಚರ್ಚೆ ನಡೆಸಿ, ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಣೆಗೆ ನಿರ್ಧರಿಸಲಾಗಿತು. ದಿನಾಂಕ 08-10-2022 ರಂದು ಕುಷ್ಟಗಿ ತಾಲೂಕಾ ಮಟ್ಟದ ಹೂಗಾರ ಮಾದಯ್ಯ ಜಯಂತಿಯನ್ನು ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಆಚರಣೆಗೆ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿತು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಹಿರಿಯ ಚೇತನಗಳಿಗೆ ಸನ್ಮಾನ ಹಾಗೂ ಪುರಸ್ಕಾರ ನೀಡಿ ಗೌರವಿಸುವುದರ ಬಗ್ಗೆ ಸಹಮತ ಲಭಿಸಿತು. ಕುಂಭ, ಕಳಸ ಸೇರಿದಂತೆ ವಿವಿಧ ವಾಧ್ಯಗಳ ಮೂಲಕ ಮೇರವಣಿಗೆಯನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಸಮುದಾಯದ ಎಲ್ಲರ ಸಹಕಾರದ ಜೊತೆಗೆ ಕಡ್ಡಾಯದ ಪಾಲ್ಗೊಳ್ಳುವಿಕೆಗೆ ಸಭೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿತು. ತಾಲೂಕಾ ಹೂಗಾರ ಸಮುದಾಯದ ಅಧ್ಯಕ್ಷ ಹನುಮಂತಪ್ಪ ಹೂಗಾರ ಕಂದಕೂರು ಸಭೆಯ ಅಧ್ಯಕ್ಷತೆವಹಿಸಿದ್ದರು. ಹೂಗಾರ ಸಮುದಾಯದ ಜಿಲ್ಲಾಧ್ಯಕ್ಷ ಗವಿಸಿದ್ಧಪ್ಪ ಹೂಗಾರ ಸೇರಿದಂತೆ ತಾಲೂಕಿನ ಮಾಲಗಿತ್ತಿ ಮಾರುತಿ ಹೂಗಾರ, ಹಾಲಪ್ಪ ನಾಗಪ್ಪ ಹೂಗಾರ, ಕುಷ್ಟಗಿ ರಾಯಪ್ಪ ಹೂಗಾರ, ಹನುಮನಾಳದ ಮಲ್ಲಿಕಾರ್ಜುನ ಹೂಗಾರ ಮತ್ತು ಮುಖಂಡರು ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು..!!