ಭಾರತ ಮಾತೆಯ ಸೇವೆ ಸೌಭಾಗ್ಯ : ನಿವೃತ್ತ ಯೋಧ ಚಂದ್ರಕಾಂತ ಮಂಗಳೂರು ಅಭಿಮತ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಭಾರತ ಮಾತೆಯ ಗಡಿಯಲ್ಲಿ ಸೇವೆ ಸಲ್ಲಿಸುವುದೇ ಒಂದು ಸೌಭಾಗ್ಯ ಎಂದು ಇಂಡಿಯನ್ ಆರ್ಮಿಯಿಂದ ನಿವೃತ್ತಿ ಹೊಂದಿ ಕೊಪ್ಪಳಕ್ಕೆ ಆಗಮಿಸಿದ ಯೋಧ ಚಂದ್ರಕಾಂತ ದೇವೇಂದ್ರಪ್ಪ ಮಂಗಳೂರು ಅವರು ಅಭಿಪ್ರಾಯವ್ಯಕ್ತಪಡಿಸಿದರು..!

ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ದೇಶದ ರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು. ದೇಶಕ್ಕಾಗಿ ನನ್ನ ಪಾಲಿನ ಸೇವೆ ಮೀಸಲಿಡಬೇಕು ಎಂಬ ಮಹಾದಾಸೆಯಿಂದ ಸೇನೆ ಸೇರ್ಪಡೆಗೊಂಡಿದ್ದು ಸಾರ್ಥಕವಾಗಿತು. 22 ವರ್ಷಗಳ ಕಾಲ ಸೇವೆ ಸಲ್ಲಿಸುವ ಸೌಭಾಗ್ಯ ಒಲಿದು ಬಂದಿದ್ದು ನನ್ನ ಪಾಲಿಗೆ ಅದೃಷ್ಟ ಎಂದರು. ಯುವಕರು ಸೇನೆ ಸೇರಲು ಹೆಚ್ಚು ಹೆಚ್ಚು ಮುಂದೆ ಬರಬೇಕಾಗಿದೆ. ಸೇನೆಯ ಸೇವೆ ಇದೊಂದು ಪುಣ್ಯದ ಕೆಲಸವೆಂದು ಬಣ್ಣಿಸಿದರು. ತಂದೆ ದೇವೇಂದ್ರಪ್ಪ ಮಂಗಳೂರು ಸೇರಿದಂತೆ ಪತ್ನಿ, ಸಹೋದರ ಹನುಮಂತ ಮಂಗಳೂರು, ಕುಟುಂಬಸ್ಥರು ಕೊಪ್ಪಳ ರೇಲ್ವೆ ನಿಲ್ದಾಣದಲ್ಲಿ ಯೋಧ ಚಂದ್ರಕಾಂತ ಮಂಗಳೂರು ಅವರನ್ನು ಆತ್ಮೀಯವಾಗಿ, ಸ್ವಾಗತಿಸಿದ ಪರಿ ಮಾತ್ರ ಮನ ಮಿಡಿಯುವಂತಿತ್ತು. ಸ್ವಾಗತದ ಸಂದರ್ಭದಲ್ಲಿ ತಂದೆಯ ತಲೆಗೆ ಸೇನೆಯ ಕ್ಯಾಪ್ ಹಾಕಿ, ವಂದನೆ ಸಲ್ಲಿಸಿದ್ದು ಮಾತ್ರ ರಾಷ್ಟ್ರೀಯತೆ ಜೊತೆಗೆ ದೇಶಾಭಿಮಾನ ಎತ್ತಿ ತೋರಿಸಿತು..!!