ಜೆಸಿಬಿ ಯಂತ್ರ ಬಡಿದು ವ್ಯಕ್ತಿ ಸಾವು

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜೆಸಿಬಿ ಯಂತ್ರ ಬಡಿದು ವ್ಯಕ್ತಿ ಸಾವಿಗೀಡಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದಲ್ಲಿ ನಡೆದಿದೆ..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಓವರ್ ಹೆಡ್ ವಾಟರ್ ಟ್ಯಾಂಕ್ ಅನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮ ಗೊಳಿಸುವ ಸಂದರ್ಭದಲ್ಲಿ ಗಂಗಾಧರ ಬಸಪ್ಪ ತಳುವಗೇರಿ ಎಂಬ ಜೆಸಿಬಿ ಚಾಲಕ ಅದೇ ಸ್ಥಳದಲ್ಲಿ ಬೈಕ್ ಮೇಲೆ ಸಾಗುತ್ತಿದ್ದ ಇಪ್ಪತ್ತೂಂದು ವರ್ಷದ ಅಲ್ತಾಫ್ ಎಂಬಾತನಿಗೆ ಜೆಸಿಬಿ ಯಂತ್ರದ ಕಬ್ಬಿಣದ ಬಕೇಟ್ ತಾಕೀದೆ.
ಅಲ್ತಾಫನ ತೊಡೆ ಭಾಗ ಹಾಗೂ ಮರ್ಮಾಂಗಕ್ಕೆ ತೀರ್ವ ಪೆಟ್ಟಾಗಿ ರಕ್ತಸ್ರಾವ ಉಂಟಾಗಿದೆ. ಕೂಡಲೇ ಅಲ್ತಾಫನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಮೃತಪಟ್ಟಿರುತ್ತಾನೆ. ಜೆಸಿಬಿ ಯಂತ್ರವನ್ನು ಅಲಕ್ಷ್ಯತನದಿಂದ ಚಲಾಯಿಸಿ ದುರ್ಘಟನೆಗೆ ಕಾರಣನಾದ ಜೆಸಿಬಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತನ ವ್ಯಕ್ತಿ ಪರನಾದ ಖಾಸೀಂ ಚಾಂದಸಾಬ ಅವರು ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.
ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!!