ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಕ್ಟೋಬರ್ 12 ರಂದು ಭೇಟಿ ನೀಡಲಿರುವ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ..!
ಕಲ್ಯಾಣ ಕರ್ನಾಟಕದ ಜನೋತ್ಸವ ಕಾರ್ಯಕ್ರಮದ ಪ್ರವಾಸದಲ್ಲಿ ಭಾಗವಹಿಸಲಿರುವ ಸಿಎಂ ಅವರು ಅ.12 ರಂದು ಕುಷ್ಟಗಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಿರುವ ಸಮಾರಂಭದಲ್ಲಿ ಭಾಗವಹಿಸುವ ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಸೇರಿದಂತೆ ಮಂತ್ರಿಗಳ ದಂಡು ಆಗಮಿಸಲಿದೆ ಎಂಬ ಮಾಹಿತಿ ಪಕ್ಕಾ ಆಗಿದೆ. ಅತ್ಯಂತ ಹಿಂದುಳಿದ ಜಿಲ್ಲೆಗಳ ತಾಲೂಕುಗಳಲ್ಲಿ ಒಂದಾಗಿರುವ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಸಿಎಂ ಭೇಟಿ ಮಾತ್ರ ಬಹಳಷ್ಟು ಚೈತನ್ಯ ನೀಡಿದೆ..!!