ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ‘ಸಂಜೀವಿನಿ’ ಯೋಜನೆಯು ನವೆಂಬರ್ 1 ರಿಂದ ಮತ್ತೆ ಜಾರಿಗೆ ಬರಲಿದೆ..!
5 ಲಕ್ಷ ರೂಪಾಯಿಗಳವರೆಗಿನ ಚಿಕಿತ್ಸೆ ಪಡೆಯುವುದಕ್ಕೆ ಯಶಸ್ವಿನಿ ಎಂಬ ಯೋಜನೆಯು ರಾಜ್ಯದ ಬಡವರ ಪಾಲಿಗೆ ಸಂಜೀವಿನಿಯೇ ಪರಿಣಮಿಸಿತು. ಆದರೆ, ಇಂತಹ ಜನಪರ ಯೋಜನೆ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಯಮಾನ್ ಭಾರತ ಸೇರಿದಂತೆ ಕಾರ್ಮಿಕ ಕಾರ್ಡಗಳ ಜಾರಿ ಮಧ್ಯದಲ್ಲಿ 2018 ರಲ್ಲಿ ತಟಸ್ಥವಾಗಿತ್ತು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಘೋಷಣೆಯಂತೆ ಯಶಸ್ವಿನಿಗೆ ಜೀವ ಬರಲಿದೆ. ಅಂದುಕೊಂಡಂತೆ ಆದರೆ, ನವೆಂಬರ್ 1 ರಿಂದ ರೈತರು ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ಮರು ಪರಿಷ್ಕರಣೆ ಮೂಲಕ ವಿಭಿನ್ನ ನಿಯಮಾವಳಿಗಳೊಂದಿಗೆ ಸದಸ್ಯತ್ವ ನೋಂದಣಿ ಆರಂಭವಾಗಲಿದೆ. 01-01-2023 ರಿಂದ 30-12-2023 ರವರಗೆ ಯೋಜನೆ ಜಾರಿಗೆ ಇರಲಿದೆ. ಕಳೆದ ಬಜೆಟ್ ನಲ್ಲಿ 300 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿತ್ತು. ಯೋಜನೆ ಮೂಲಕ ಸುಮಾರು 1650 ರೋಗಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ.
ಗ್ರಾಮೀಣ ಪ್ರದೇಶದ ಸಹಕಾರಿ, ಸಂಘ, ಬ್ಯಾಂಕ್ ಕ್ಷೇತ್ರದಲ್ಲಿ ಸದಸ್ಯರಾದವರು ಹಾಗೂ ಇದರೊಡನೆ ವ್ಯವಹರಿಸುವ ಸ್ವ ಸಹಾಯ ಸಂಘ ಮತ್ತು ಸ್ತ್ರೀ ಶಕ್ತಿ ಸಂಘಗಳ ನಾಲ್ಕು ಜನ ಸದಸ್ಯರ ಕುಟುಂಬಕ್ಕೆ 500 ರೂಪಾಯಿಗಳು ಹಾಗೂ ನಗರ ಪ್ರದೇಶದವರಿಗೆ ಒಂದು ಸಾವಿರ ರೂಪಾಯಿಗಳ ಸದಸ್ಯತ್ವ ದರದೊಂದಿಗೆ ಯಶಸ್ವಿನಿ ಯೋಜನೆಗೆ ನೋಂದಾಯಿಸಿ ಅಧಿಕೃತ ಕಾರ್ಡದಾರರಾಗಬಹುದು. ಇಂತಹ ಮಹತ್ವದ ಯೋಜನೆಗೆ ಸಿಎಂ ಬೊಮ್ಮಾಯಿ ಅವರು ಮತ್ತೆ ಜೀವ ತುಂಬುವ ಮೂಲಕ ಸಂಜೀವಿನಿಯಾಗಲಿದ್ದಾರೆ..!