ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಚರಂಡಿ ನೀರಿನಿಂದ ನಡುಗಡ್ಡೆಯಾಗಿರುವ ಮನೆವೊಂದಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ ಬಿ.ಫೌಜಿಯಾ ತರುನ್ನಮ್ ಅವರು ಭೇಟಿ ನೀಡುವ ಮೂಲಕ ಮನೆ ಸುತ್ತುವರಿದಿರುವ ಚರಂಡಿ ನೀರನ್ನು ಕೂಡಲೇ ಹೊರ ಹಾಕುವ ವ್ಯವಸ್ಥೆ ಕೈಗೊಳ್ಳಬೇಕು ಮತ್ತು ಶಾಶ್ವತವಾಗಿ ಸಮಸ್ಯೆ ಬಗೆಹರಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ ಪ್ರಸಂಗ ಜರುಗಿತು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ಜರುಗಿದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಪಂ ಸಿಇಓ ಅವರು, ಮಳೆ ಸೇರಿದಂತೆ ಗ್ರಾಮದ ಚರಂಡಿ ನೀರಿನಿಂದ ನಡುಗಡ್ಡೆಯಾಗಿರುವ ಗ್ರಾಮದ ರೇಣುಕಾ ಹರಿಜನ ಎಂಬುವರಿಗೆ ಸೇರಿದ ಮನೆಗೆ ಭೇಟಿ ನೀಡಿ, ಜಿಪಂ, ತಾಪಂ, ವಿಶೇಷ ಅನುದಾನದಲ್ಲಿ ಅಥವಾ ಉಳಿತಾಯ ನಿಧಿಯಲ್ಲಿ ಚರಂಡಿ ನಿರ್ಮಾಣದ ಕಾಮಗಾರಿ ಕೈಗೊಳ್ಳುವುದಾಗಿ ಪತ್ರಿಕೆಗೆ ಸಿಇಓ ಅವರು ಸ್ಪಷ್ಟಪಡಿಸಿದರು. ತಾಪಂ ಇಓ ಶಿವಪ್ಪ ಸುಭೇದಾರ, ಪಿಡಿಓ ಪಂಪಣ್ಣ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು..!!