ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ದಿನಾಂಕ 25-12-2022 ರಂದು ಕಸಾಪ ಭವನದಲ್ಲಿ ಸಾಯಂಕಾಲ 5 ಗಂಟೆಗೆ ‘ಅಮೃತ ಭಾರತಿ’ ಕವನ ಸಂಕಲನ ಬಿಡುಗಡೆಯಾಗಲಿದೆ..!
ಸ್ವಾತಂತ್ರ್ಯದ ಅಮೃತ ಮಹೋತ್ಸದ ಹಿನ್ನಲೆಯಲ್ಲಿ ಸ್ಥಳೀಯ ಸ್ಪೂರ್ತಿ ಯುವಕ ಸಂಘ ಹಾಗೂ ತಾವರಗೇರಾ ಕಸಾಪ ಹೋಬಳಿ ಘಟಕ ಸಂಯುಕ್ತಾಶ್ರಯದಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯ ಸೇರಿದಂತೆ ಹೊರ ರಾಜ್ಯದ ಕನ್ನಡಿಗರು ಬರೆದ ವಿವಿಧ 75 ಕವನ ಸಂಕಲನಗಳ ಗುಚ್ಛವೇ ಈ ‘ಅಮೃತ ಭಾರತಿ’ ಆಗಿದೆ ಎಂದು ಸಂಘದ ಶ್ಯಾಮ್ ಬಂಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!
