ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮೃತ ಬಿ.ಎಸ್.ಎಫ್ ಯೋಧನ ಅಂತಿಮ ಸಂಸ್ಕಾರವು ಯಾವುದೇ ತರಹದ ಸರಕಾರಿ ಗೌರವ ಇಲ್ಲದೆ ಜರುಗಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ನಡೆದಿದೆ..!


ಮಿಜೋರಾಮ ಸೇನಾಪಡೆಯಲ್ಲಿ ಸೇವೆಯಲ್ಲಿದ್ದು ಅನಾರೋಗ್ಯದಿಂದ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯೋಧ ಅಂಬರೇಶ ತುಮರಿ. 22-12-2022 ರಂದು ಬೆಳಿಗ್ಗೆ ಮೃತಪಟ್ಟಿರುವ ಯೋಧನ ಕುಟುಂಬವು ಬಿ.ಎಸ್.ಎಫ್ ತುಕಡಿವೊಂದು ಗೌರವ ಸಲ್ಲಿಸಲಿಕ್ಕೆ ಆಗಮಿಸುತ್ತದೆ ಎಂದು ಇಡೀ ದಿನ ವಿನಾಕಾರಣ ಕಾಯ್ದು ಸುಸ್ತಾಗಿದೆ. ಸ್ಥಳೀಯ ನಿವೃತ್ತ ಯೋಧರ ಮಾಹಿತಿಯಂತೆ ದಿನಾಂಕ 23 ಅಂತಿಮ ಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ, ಮಾಹಿತಿಯಂತೆ ಬೆಂಗಳೂರಿನಿಂದ ಗೌರವ ಸಲ್ಲಿಸಲು ಆಗಮಿಸಬೇಕಾಗಿದ್ದ ಯಾವುದೇ ತುಕಡಿ ಬಾರದಿದ್ದಾಗ ಸ್ಥಳೀಯ ನೂರಾರು ಜನ ನಿವೃತ್ತ ಯೋಧರು ಸೇರಿದಂತೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತು..!!


