ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಸೇರಿದಂತೆ ಐವರು ‘ಬಹುತ್ವ ಭಾರತೀಯ ಪ್ರಶಸ್ತಿ’ ಗೆ ಆಯ್ಕೆ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಬಹುತ್ವ ಭಾರತ ಬಳಗದ ನೇತೃತ್ವದಲ್ಲಿ ಪುನೀತ್ ಗೀತನಮನ, ರವಿ ಉಕ್ಕುಂದ ನುಡಿನಮನ, ಬಹುತ್ವ ಭಾರತೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ 24-12-2022 ರಂದು ಸಂಜೆ ೫.೩೦ಕ್ಕೆ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಜರುಗಲಿದೆ..!

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರ ಚಾಲನೆ ನೀಡಲಿದ್ದಾರೆ. ಸಾನಿಧ್ಯವನ್ನು ಸಂಸ್ಥಾನ ಗವಿಮಠ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋರಾಟಗಾರ ಜೆ.ಭಾರದ್ವಾಜ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರು ಹಾಗೂ ನೋಟರಿ ಆಸೋಷಿಯೇಷನ್, ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಗಳಾದ ಎಸ್.ಆಸೀಫ್ ಅಲಿ ಹಾಗೂ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರು ಟಿ.ರತ್ನಾಕರ, ಸಮಾಜ ಸೇವಕರಾದ ಮೊಹ್ಮದ್ ರಫಿಯುದ್ದಿನ್ ಅಹ್ಮದ್ (ಆರ್‌ಟಿಓ), ಸೈಯದ್ ಗೌಸ್ ಪಾಷಾ ಆಗಮಿಸಲಿದ್ದಾರೆ ಇದೇ ಸಂದರ್ಭದಲ್ಲಿ ೨೦೨೧-೨೨ನೇ ಸಾಲಿನ ಬಹುತ್ವ ಭಾರತೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಪತ್ರಿಕೋದ್ಯಮ, ಹೋರಾಟ ಮತ್ತು ಸಂಘಟನೆಯ ಗಣನೀಯ ಸೇವೆಗಾಗಿ ಬೆಂಗಳೂರಿನ ಹಿರಿಯ ಪತ್ರಕರ್ತರಾದ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ, ಮಾನವ ಹಕ್ಕುಗಳ ಹೋರಾಟಗಾರರು, ಚಿಂತಕರಾದ ದಾವಣಗೆರೆಯ ಹಿರಿಯ ವಕೀಲರಾದ ಅನೀಸ್ ಪಾಷಾ, ಧಾರವಾಡದ ಲಡಾಯಿ ಪ್ರಕಾಶನದ ಮೂಲಕ ಇಡೀ ನಾಡಿನಾದ್ಯಂತ ಹೆಸರಾಗಿರುವ ಜನಪರ ಹೋರಾಟಗಾರರು,ಚಿಂತಕರಾದ ಬಸವರಾಜ್ ಸೂಳಿಬಾವಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಬರಹಗಾರ್ತಿಯಾಗಿ, ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ದು.ಸರಸ್ವತಿ ಬೆಂಗಳೂರ, ಶಿಕ್ಷಣ ಸಂಸ್ಥೆಗಳ ಮೂಲಕ ಇಡೀ ನಾಡಿನಾದ್ಯಂತ ಮನೆ ಮಾತಾಗಿರುವ, ಸಮಾಜಮುಖಿ ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು ಗಂಗಾವತಿ ಹಾಗೂ ದಲಿತ ಚಿಂತಕರು,ಬರಹಗಾರರು,ಹಿರಿಯ ಪತ್ರಕರ್ತರಾದ ವಿಜಯಪುರದ ಅನಿಲ್ ಹೊಸಮನಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾಲ್ಕು ದಿಕ್ಕು ದಿನಪತ್ರಿಕೆಯ ಲೋಕಾರ್ಪಣೆಯೂ ನಡೆಯಲಿದೆ.

ನಂತರ ಪುನೀತ್ ರಾಜ್ ಕುಮಾರ್ ಹಾಗೂ ರವಿ ಉಕ್ಕುಂದರಿಗೆ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ಅಭಿನವ ಮ್ಯೂಜಿಕಲ್ ಇವೆಂಟ್ಸ್, ಕೊಪ್ಪಳ ಬಾಷಾ ಹಿರೇಮನಿ ಹಾಗೂ ಸಂಗಡಿಗರಿಂದ ಸಂಗೀತ ಗೀತನಮನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸಿ.ವಿ.ಚಂದ್ರಶೇಖರ್ ಉದ್ಘಾಟಿಸಲಿದ್ದು, ಗಾಯನದ ಮೂಲಕ ಡಿವೈಎಸ್ಪಿ ಆರ್.ಎಸ್.ಉಜ್ಜನಿಕೊಪ್ಪ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೃಷ್ಣ ಉಕ್ಕುಂದ ,ಮಲ್ಲನಗೌಡ ಗೌಡರ ಸಿಪಿಐ, ಸುರೇಶ ಡಿ. ಸಿಪಿಐ, ವಿಶ್ವನಾಥ ಹಿರೇಗೌಡರ ಸಿಪಿಐ, ಅಮರೇಶ ಹುಬ್ಬಳ್ಳಿ ಸಿಪಿಐ, ಗೂಳಪ್ಪ ಹಲಗೇರಿ,ಬಾಲಚಂದ್ರ ಮುನಿರಾಬಾದ, ಶ್ರೀನಿವಾಸ ಗುಪ್ತಾ, ವಜೀರ್ ಗೋನಾ, ಕೆ.ಎಂ.ಸಯ್ಯದ್, ರಾಜು ನಾಯಕ್, ಕಾಟನ್ ಪಾಷಾ, ರಾಜಶೇಖರ ಆಡೂರ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭಲ್ಲಿ ಕೊಪ್ಪಳದಲ್ಲಿ ಚಲನಚಿತ್ರೋಧ್ಯಮದಲ್ಲಿ ಸೇವೆ ಸಲ್ಲಿಸಿದ ವಿವಿಧ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಶಿವಾನಂದ, ಎಂ.ಎಂ.ಕಿಲ್ಲೇದಾರ್, ಶ್ಯಾಮಸುಂದರ್ ಪರ್ಡೆಕರ್, ರಾಘು ವಾಡಪ್ಪಿ, ರಮೇಶ, ರಾಮಣ್ಣ,ವಿರೇಶ ಶೆಟ್ಟಿ, ಸಿದ್ದಪ್ಪ, ಸ್ವಾಮಿ, ಸಂಗಪ್ಪ, ಹನುಮಂತ, ಮಲ್ಲಣ್ಣ, ಜುಲ್ಲುಖಾದರ್ ಖಾದ್ರಿ, ವಿಜಯ,ಅಜೀಜ್ ಗುಳೇದಗುಡ್ಡ, ವಸಂತ ಪವಾರ, ವಿರೇಶ ಮಹಾಂತಯ್ಯನಮಠ, ಅನ್ವರಸಾಬ ಬಿಸರಳ್ಳಿ, ತಾಹೀರ್ ಹುಸೇನ್ ಹಂಜವಿ, ತೊಂಡೆಪ್ಪ ದಲಬಂಜನ, ಸೈಯದ್ ದಾದು ಖಾದ್ರಿ, ಸೈಯದ್ ಅನ್ನು ಖಾದ್ರಿಯವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹೇಮಂತಕುಮಾರ್, ನಯೀಮ್ ಅಹ್ಮದ್, ಮೌಲಾಹುಸೇನ್ ವರ್ದಿ, ರಜನಿಕಾಂತ ,ಮಲ್ಲಿಕಾರ್ಜುನ ಶಾಸ್ತ್ರಿಮಠ ಆಗಮಿಸಲಿದ್ಧಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬಹುತ್ವ ಭಾರತ ಬಳಗದ ಸಂಘಟಕರಾದ ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಎಚ್.ವಿ. ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ..!!