ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಒಂದುಗೂಡಿಸಿದ ಸಾಮಾಜಿಕ ಜಾಲತಾಣ..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಹಿಂದು ಮುಸ್ಲಿಂ ಪ್ರೇಮಿಗಳನ್ನು ಒಂದುಗೂಡಿಸುವಲ್ಲಿ ಸಾಮಾಜಿಕ ಜಾಲತಾಣ ಯಶಸ್ವಿಯಾಗಿದೆ..!

ಹೈದ್ರಾಬಾದ್ ಮೂಲದ ಯುವಕ ಶೇಕ್ ವಹಿದ್ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಇಂದಿರಾನಗರದ ಯುವತಿ ನಡುವೆ ಕಳೆದ ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣ ಇನ್ಸಟ್ರಾಗ್ರಾಮನಲ್ಲಿ ಅಗಾದವಾದ ಸ್ನೇಹ ಬೆಳೆದು, ಸ್ನೇಹವು ಪರಸ್ಪರ ಇಬ್ಬರ ನಡುವೆ ಪ್ರೀತಿಗೆ ತಿರುಗಿ ಈ ಸಧ್ಯ ಪ್ರೇಮ ವಿವಾಹವಾಗಿ ಸಾಮರಸ್ಯದ ಮೂಲಕ ಅಂತ್ಯ ಕಂಡಿದೆ..!

ಆದರೆ, ಯುವತಿ ಮನೆಯಿಂದ ಆಚೆ ಹೋದವಳು ಮರಳಿ ಬಾರದಿದ್ದಾಗ ಯುವತಿ ಮನೆಯವರು ಡಿ.16 ರಂದು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಮುಸ್ಲಿಂ ಯುವಕನ ಜೊತೆಗೆ ಹಿಂದೂ ಯುವತಿ ಹೆಜ್ಜೆ ಹಾಕಿರುವ ವಿಷಯ ತಿಳಿಯುತಿದ್ದಂತೆ ಪಟ್ಟಣದಲ್ಲಿ ಲವ್ ಜಿಹಾದ್ ವಾಸನೆ ಹರಡಲಾರಂಭಿಸಿದೆ. ಇಬ್ಬರೂ ಪ್ರೇಮಿಗಳನ್ನು ಪತ್ತೆ ಹಚ್ಚಲಾಗಿದ್ದು, ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿರುವುದು ಖಚಿತವಾಗಿದೆ. ಆದರೆ, ಯುವಕನ ಒತ್ತಾಯ ಅಥವಾ ಆತನ ಕಡೆಯವರ ಬಲವಂತಕ್ಕೆ ಒಳಗಾಗದೇ ಸ್ವತಃ ಯುವತಿ ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಯುವತಿ ಸ್ಪಷ್ಟಪಡಿಸಿದ್ದಾಳೆ. ಹಾಗಾಗಿ ಇದು ಲವ್ ಜಿಹಾದ್ ಅಲ್ಲ ಎಂದು ಕುಷ್ಟಗಿ ಪೊಲೀಸರು ಹೇಳಿಕೆ ನೀಡಿದ್ದಾರೆ..!!