ಜ.14,15 ಹಾಗೂ 16 ರಂದು ಸಿದ್ಧನಕೊಳ್ಳದ ಮಹಾ ರಥೋತ್ಸವ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂಭ್ರಮ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಬಾಗಲಕೋಟೆ (ಕೊಪ್ಪಳ) : ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಸಿದ್ಧನಕೊಳ್ಳದ ನಿರಂತರ ದಾಸೋಹ ಹಾಗೂ ಕಲಾ ಪೋಷಕರ ಮಠದ ಪುಣ್ಯ ಕ್ಷೇತ್ರದಲ್ಲಿ ದಿನಾಂಕ 14-01-2023 ರಿಂದ 16-01-2023 ರವರೆಗೆ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2023 ಹಮ್ಮಿಕೊಳ್ಳಲಾಗಿದೆ..!

 

 

ಡಾ.ಶಿವಕುಮಾರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರಗುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತನಾಮರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು ಹಾಗೂ ಶಾಸಕರು ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಲ ಚಲನಚಿತ್ರಗಳು ಬಿಡುಗಡೆ ಕೂಡಾ ನಡೆಯಲಿವೆ ಎಂದು ಮಹಾಸ್ವಾಮಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಹೆಲಿಕ್ಯಾಪ್ಟರ್ ಸೇವೆ : ಪ್ರತಿ ವರ್ಷದಂತೆ ಈ ವರ್ಷವು ಸಿದ್ಧನಕೊಳ್ಳದ ಮಹಾತಪಸ್ವಿ ಪರಮಪೂಜ್ಯ ಲಿಂಗೈಕ್ಯ ಸಿದ್ದಪ್ಪಪ್ಪಜ್ಜನವರ ಕತೃ ಗದ್ದುಗೆಗೆ ಮಹಾ ರಥೋತ್ಸವದ ದಿನದಂದು ಹೇಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚಣೆ ವಿಶೇಷ ಕಾರ್ಯಕ್ರಮ ಜರಗುವುದು.