ರಾಷ್ಟ್ರಮಟ್ಟಕ್ಕೆ ಜಿಗಿದ ಮಹಾಲಿಂಗಪುರದ “ಹನುಮಂತ”

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಇದೊಂದು ಸಾಹಸಿ ಓಟಗಾರ ಹನುಮಂತನ ಕಥೆ ಇದು..!

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಲಾಂಗ್ ರನ್ನಿಂಗ್ 1500 ಹಾಗೂ 3000 ಸಾವಿರ ಮೀಟರ್ ಓಟದಲ್ಲಿ ತನ್ನದೇ ಆದ ವಿಶಿಷ್ಟ ಸಾಧನೆ ಗೈದ ಕ್ರೀಡಾಪಟು ಹನುಮಂತ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ‌ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯುಸಿಯಲ್ಲಿ ಅಭ್ಯಾಸ ಮಾಡುತ್ತಿರುವ ಅಪ್ಪಟ ಗ್ರಾಮೀಣ ಕ್ರೀಡಾಪಟು. ಬಾಲ್ಯದಲ್ಲೇ ಓಟದ ಗೀಳು ರೂಢಿಸಿಕೊಂಡಿದ್ದ ಹನುಮಂತ ವರಲ್ಯಾಗೋಳ ಮಹಾಲಿಂಗಪುರ ಪಟ್ಟಣದ ಅಣತಿ ದೂರದ ರನ್ನಬೆಳಗಲಿ ಗ್ರಾಮದ ತೋಟದ ಮನೆಯ ನಿವಾಸಿ. ಯಾವುದಾದರೂ ಸರಕಾರಿ ನೇಮಕಾತಿಗಾಗಿ ಓಟದ ಬೆನ್ನು ಹತ್ತಿದ ಹನುಮಂತನಿಗೆ ಈಗ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಗುರಿ ತಲುಪಿದ್ದಾನೆ. ಮಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿನ 1500 ಮೀಟರ್ ಓಟವನ್ನು 4-18 ನಿಮಿಷಗಳಲ್ಲಿ ಹಾಗೂ 3000 ಮೀಟರ್ ಓಟವನ್ನು 9-7 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ದ್ವೀತಿಯ ಸ್ಥಾನಕ್ಕೆ ತೃಪ್ತಿಪಟ್ಟುಗೊಂಡಿದ್ದಾನೆ. ಕ್ರೀಡಾಪಟು ಸಾಧನೆಗೆ ಕೆ.ಎಲ್.ಇ ಸಂಸ್ಥೆ ಸೇರಿದಂತೆ ಕಾಲೇಜ್ ಪ್ರಾಚಾರ್ಯ, ದೈಹಿಕ ಶಿಕ್ಷಣ ಉಪನ್ಯಾಸಕ, ಸಿಬ್ಬಂದಿ ವರ್ಗ, ಕ್ರೀಡಾಭಿಮಾನಿಗಳು ಮತ್ತು ಪಾಲಕರು ಅಭಿನಂದಿಸಿದ್ದಾರೆ..!!

ಸುದ್ದಿ ಕೃಪೆ : ಶಿವಲಿಂಗ ಸಿದ್ನಾಳ