ಗುರು ಸ್ಥಾನ ದೊಡ್ಡದು : ಕಾಂಬ್ಳೆ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಗತ್ತಿನಲ್ಲಿ ‘ಗುರು’ ಸ್ಥಾನಕ್ಕಿಂತ ಮೊಗದೊಂದಿಲ್ಲವೆಂದು ಬಿಇಓ ಸುರೇಂದ್ರ ಕಾಂಬ್ಳೆ ಅವರು ಅಭಿಪ್ರಾಯವ್ಯಕ್ತಪಡಿಸಿದರು..!

ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತ್ಯಂತ ಪವಿತ್ರವಾಗಿರುವ ಗುರು ಸ್ಥಾನದಲ್ಲಿರುವವರಿಗೆ ಸ್ಥಾನದ ಅರಿವು ಇರಬೇಕಾಗಿದೆ. ಗುರುವಿನ ಪಾವಿತ್ರ್ಯತೆ ಉಳಿಸಿಕೊಳ್ಳುವಲ್ಲಿ ಶಿಕ್ಷಕರು ನಡೆದುಕೊಳ್ಳುವಂತೆ ಸಲಹೆ ನೀಡಿದರು.
ಶಿಕ್ಷಕರ ಹಲವು ಇಲಾಖೆ ಬಾಕಿ ಕೆಲಸಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿತು. ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದುರಿ, ಕಾರ್ಯದರ್ಶಿ ಹೈದರಲಿ ಜಾಲಿಹಾಳ, ಗೌರವಾಧ್ಯಕ್ಷ ಲಕ್ಷ್ಮಣ್ ಪೂಜಾರ, ನಿಂಗಪ್ಪ ಗುನ್ನಾಳ, ಅಲ್ತಾಫ್ ಹುಸೇನ್ ಯಮನೂರಪ್ಪ ಲಮಾಣಿ, ವಿರೂಪಾಕ್ಷಪ್ಪ ಅಂಗಡಿ, ಬಿಇಓ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಶಿವಶಂಕರ, ಚಂದ್ರಶೇಖರ, ಶರಣಗೌಡ ಗೌಡರ, ವಿಠ್ಠಲ್ ಪತ್ತಾರ, ಹನುಮಂತಪ್ಪ ಗೋಡೆಕಾರ, ಬಿಇಓ ಕಚೇರಿ ಸಿಬ್ಬಂದಿ ಸೇರಿದಂತೆ ಹನುಮನಾಳ ವಲಯದ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..!!