ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ತಾಲೂಕಿನ ಗುಳದಳ್ಳಿ ಗ್ರಾಮ ಪಂಚಾಯತಿಯ ಗಬ್ಬೂರು ಗ್ರಾಮದ ನರೇಗಾ ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಜರುಗಿದೆ..!
ಹನುಮಂತಪ್ಪ ವೀರುಪಣ್ಣ ಕಂಬಳಿ (48) (ಐಡಿ ಸಂಖ್ಯೆ 26462) ಸಾವಿಗೀಡಾದ ನತದೃಷ್ಟ ಕಾರ್ಮಿಕ.
ಪಂಚಾಯಿತಿಯಿಂದ ಕೈಗೊಂಡಿದ್ದ ಗಬ್ಬೂರು ಗ್ರಾಮದ ನಾಲಾ ಹೂಳು ಎತ್ತುವ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಕಾರ್ಮಿಕನಿಗೆ ಹೃದಯಾಘಾತವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಾರ್ಮಿಕನ ಕುಟುಂಬಕ್ಕೆ ಪರಿಹಾರಕ್ಕಾಗಿ ಸ್ಥಳೀಯ ಕಾರ್ಮಿಕರು ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ..!!

