ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದ ಕುಟುಂಬವೊಂದರ ಆಸ್ತಿ ವಿವಾದಕ್ಕೆ ಕಾರಣಿಕರ್ತನಾದ ಕರವಸೂಲಿಗಾರ ಯಾಸೀನ್ ಖಾನ್ ಅಹ್ಮದ್ ಖಾನ್ ಮುದಗಲ್ ಎಂಬಾತ ಈಗಾಗಲೇ ಸೇವೆಯಿಂದ ಅಮಾನತ್ತುಗೊಂಡಿದ್ದಾನೆ. ಆದರೆ, ಇಡೀ ಪ್ರಕರಣಕ್ಕೆ ಈತನೇ ಕಿಂಗ್ ಫಿನ್ ಎಂಬುದು ವಿಶೇಷ..!
ಕಟ್ಟಡ ನಿರ್ಮಾಣಕ್ಕೆ ಒತ್ತಾಯಿಸಿ ಇತ್ತೀಚೆಗೆ ತಳುವಗೇರಾ ಗ್ರಾಮದ ಶಿವಪ್ಪ ಬಸಪ್ಪ ಹಿರೇಗಣ್ಣನವರ ಕುಟುಂಬದ ಸದಸ್ಯರು ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟಿಸಿದ್ದರು. ಆದರೆ, ಪ್ರಕರಣ ಈ ಹಂತ ತಲುಪಲು ಈ ಹಿಂದೆ ಕರವಸೂಲಿಗಾರನಾಗಿದ್ದ ಯಾಸೀನ್ ಖಾನ್ ಅವರು ಕಾರಣರಾಗಿದ್ದಾರೆ ಎಂಬುದು ಮಾತ್ರ ಬಹಿರಂಗ ಸತ್ಯವಾಗಿದೆ. ಇವರ ಹಸ್ತಾರಕ್ಷರಗಳಲ್ಲಿಯೇ ಈ ಹಿಂದಿನ (2004-2005 ಡಿಮಾಂಡ್ ರೆಜಿಸ್ಟರ್) ದಾಖಲೆಗಳಲ್ಲಿ 187/1 ಆಸ್ತಿ ಹೊಸದಾಗಿ ನಮೂದಾಗಿರುವ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ. ಇಂತಹ ಪ್ರಕರಣಗಳು ಈ ಪಂಚಾಯಿತಿಯಲ್ಲಿ ಸಾಕಷ್ಟು ಇವೆ. ಒಂದು ಆಸ್ತಿಗೆ ಇಬ್ಬರು ಮತ್ತು ಮೂರು ಜನರಿಗೆ ಹಕ್ಕು ಪತ್ರಗಳು ನೀಡಿರುವುದು ತಳುವಗೇರಾ ಪಂಚಾಯಿತಿಯಲ್ಲಿ ಉದಾಹರಣೆಗಳಿವೆ ಎಂದು ಗ್ರಾಮಸ್ಥರು ಪತ್ರಿಕೆಗೆ ದೂರಿದ್ದಾರೆ.
ಪಿಡಿಓಗಳು ಕಾರಣ : ಪಿಡಿಓಗಳು ಪಂಚಾಯಿತಿಗಳಿಗೆ ವಾರಕ್ಕೊಮ್ಮೆ ಭೇಟಿ ನೀಡುವುದೇ, ಕರವಸೂಲಿಗಾರರು ನಕಲಿ ದಾಖಲೆಗಳ ಸೃಷ್ಟಿಗೆ ಮೂಲ ಕಾರಣವಾಗಿದೆ. ಭ್ರಷ್ಟಾಚಾರದ ಕಿಂಗ್ ಫಿನ್ ಗಳಾಗಿರುವ ಕೆಲ ಕರವಸೂಲಿಗಾರರು ಪಂಚಾಯಿತಿಯ ಎಲ್ಲಾ ಕಾರ್ಯವನ್ನೂ ಇವರೇ ನಿರ್ಧಿರಿಸುತ್ತಾರೆ. ತಳುವಗೇರಾ ಆಸ್ತಿ ವ್ಯಾಜ್ಯಕ್ಕೆ ಕರವಸೂಲಿಗಾರರು ಕಾರಣವಾಗಿದ್ದಾರೆ. ತಾಲೂಕಿನ ಕೆಲ ಕರವಸೂಲಿಗಾರರು ಪಿಡಿಓಗಳನ್ನು ಕಂಟ್ರೋಲ್ ನಲ್ಲಿಟ್ಟುಕೊಂಡಿದ್ದಾರೆ ಎಂಬ ಗ್ರಾಮಸ್ಥರ ಆರೋಪ ಸತ್ಯಕ್ಕೆ ಸಮೀಪವಾಗಿದೆ..!!
“ಪ್ರಕರಣಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪಿಡಿಓ ಶ್ರೀಶೈಲ ಪೊಲೇಸಿ ಬಹಿರಂಗಪಡಿಸುವ ಮೂಲಕ ವ್ಯಾಜ್ಯಕ್ಕೆ ಇತಿ ಶ್ರೀ ಹಾಡಬೇಕಾಗಿರುವುದು ಬಾಕಿ ಇದೆ”
