ಕೊಪ್ಪಳದಲ್ಲಿ ಶಿವಾಜಿ ಜಯಂತಿ ಆಚರಣೆ..!

 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ನಗರದ ಗಡಿಯಾರ ಕಂಬದ ಬಳಿಯ ಹಳೆ ಪಾಂಡುರಂಗ ದೇವಸ್ಥಾನದಲ್ಲಿ ಗುರುವಾರ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನ ಜಿಲ್ಲಾ ಘಟಕದವತಿಯಿಂದ ಶಿವಾಜಿ ಮಹಾರಾಜರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು..!

ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಕೆಎಂಪಿ ಜಿಲ್ಲಾಧ್ಯಕ್ಷ ಕಳಕಪ್ಪ ಜಾಧವ್, ಕಾರ್ಯದರ್ಶಿ ಪ್ರಕಾಶ ಮಂಗಳೂರು, ವಸಂತ ಲೋಂಡೆ, ಕ್ರಿಷ್ಟಪ್ಪ ಬಂಕದ, ಸುಭಾಸ್ ಮರಾಠಿ, ತಾನಾಜಿ, ನಗರಸಭೆ ಸದಸ್ಯೆ ದೇವಕ್ಕ ಕಂದಾರಿ, ನಾಗೇಂದ್ರರಾವ್ ಸುರ್ವೆ, ಪರಶುರಾಮ ಮರಾಠಿ, ಹೇಮಾವತಿ ಮಂಗಳೂರು, ಗವಿಸಿದ್ದಪ್ಪ ನಿಂಬಾಳ್ಕರ್, ಶಿಲ್ಪಾ ಮಂಗಳೂರು, ಪ್ರೇಮಕ್ಕ ಕದಂ, ಡಾ.ನಾಗರಾಜ ಶಿಂಧೆ, ಮಂಜುಳಾ ಪವಾರ್, ಕೃಷ್ಣ ಜಾಲಿಹಾಳ, ಆನಂದ ಹಾಲಳ್ಳಿ, ಗಣೇಶ ಪವಾರ್, ಶಿವಾಜಿ ಪುರ್ಕಿ, ಬಾಳಪ್ಪ ಪವಾರ್, ನಾಗರಾಜ ಅಡ್ಯಾಳ ಸೇರಿದಂತೆ ಸಮುದಾಯದವರು ಭಾಗವಹಿಸಿದ್ದರು..!

ಸುದ್ದಿ ಕೃಪೆ : ಪವಾರ ರಮೇಶ