ಯಶೋಧಾ ವಂಟಗೋಡಿ ಕೊಪ್ಪಳದ ನೂತನ ಎಸ್.ಪಿ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಎಸ್.ಪಿ ಅರುಣಾಂಗ್ಷುಗಿರಿ ಅವರನ್ನು ಸರಕಾರ ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಿದ್ದು, ಕೊಪ್ಪಳಕ್ಕೆ ನೂತನ ಎಸ್. ಪಿ ಯಾಗಿ ಯಶೋಧಾ ವಂಟಗೋಡಿ ಅವರನ್ನು ನೇಮಕಗೊಳಿಸಿದೆ..!

2015 ರ ಐಪಿಎಸ್ ಬ್ಯಾಚ್ ನ ಯಶೋಧಾ ವಂಟಗೋಡಿ ಅವರು ಬೆಳಗಾವಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಲ್ಲಿಯವರೆಗೆ ಸೇವೆಸಲ್ಲಿಸುತ್ತಿದ್ದರು. ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗರಾಳ ಗ್ರಾಮದವರು ಎಂಬುದು ವಿಶೇಷ. ಅರುಣಾಂಗ್ಷುಗಿರಿ ಅವರನ್ನು ಬೆಂಗಳೂರಿನ ನಗರ ಮೀಸಲು ಪಡೆಯ ಡೆಪ್ಯೂಟಿ ಸಿಟಿ ಕಮೀಷನರ್ ಆಗಿ ವರ್ಗಾವಣೆಗೊಳಿಸಲಾಗಿದೆ..!!