ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಎರಡು ಗ್ರಾಮಗಳಲ್ಲಿನ ಪ್ರತ್ಯೇಕ ಜಮೀನುಗಳಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ತೋಟಗಾರಿಕೆ ಬೆಳೆ ಸೇರಿದಂತೆ ಎರಡು ಎಕರೆ ಕಡಲೆ ಫಸಲು ಸುಟ್ಟು ಕರಕಲು ಆಗಿರುವ ಘಟನೆ ಜರುಗಿದೆ..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ ಮಹ್ಮದ್ ಸೀರಾಜುದ್ಧೀನ್ ಮೂಲಿಮನಿ ಎಂಬುವರಿಗೆ ಸೇರಿದ ಜಮೀನಿನಲ್ಲಿರುವ ಟಿ.ಸಿಯಲ್ಲಿನ ಆಕಸ್ಮಿಕ ಬೆಂಕಿಯಿಂದ ನೂರಾರು ಲಿಂಬೆ ಸೇರಿದಂತೆ ನುಗ್ಗೆ ಗಿಡಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿಗಳ ಫಸಲು ಹಾಳಾಗಿರುವುದು ವರದಿಯಾಗಿದೆ. ಅಲ್ಲದೆ, ಹಿರೇಮನ್ನಾಪೂರ ಗ್ರಾಮದ ಗುರುರಾಜ ಕುಲಕರ್ಣಿ ಎಂಬುವರಿಗೆ ಸೇರಿದ ಕಡಲೆ ಬೆಳೆಯ ಜಮೀನಿಗೆ ರಸ್ತೆ ಬದಿಯಲ್ಲಿ ಹತ್ತಿಕೊಂಡಿರುವ ಬೆಂಕಿ ಜಮೀನಿಗೆ ತೆಗೆದುಕೊಂಡು ಹತ್ತು ಎಕರೆ ಜಮೀನಿನಲ್ಲಿ ಎಕರೆಯಷ್ಟು ಕಡಲೆ ಬೆಳೆಯು ಬೆಂಕಿಗೆ ಹಾಳಾಗಿ ಹೋಗಿರುವುದು ಸ್ಪಷ್ಟವಾಗಿದೆ. ಎರಡು ಪ್ರತ್ಯೇಕ ಘಟನೆಯಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿರುವ ಕುಷ್ಟಗಿ ಅಗ್ನಿಶಾಮಕ ದಳದ ಮುಖ್ಯಸ್ಥ ರಾಜು ನರಸಪ್ಪ ಪತ್ರಿಕೆಗೆ ಸ್ಪಷ್ಟಪಡಿಸಿದ್ದಾರೆ..!!
