ಅಂಜನಾದ್ರಿ ವೀಕ್ಷಿಸಿದ ಜಿಪಂ ನೂತನ ಸಿಇಓ ರಾಹುಲ್ ಪಾಂಡೆ ದಂಪತಿ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಹನುಮನ ಜನ್ಮ ಸ್ಥಳವಾದ ಅಂಜನಾದ್ರಿ ಪರ್ವತ ಪ್ರದೇಶಕ್ಕೆ ಜಿಪಂಗೆ ನೂತನಾವಗಿ ಸಿಇಓ ಆಗಿ ಅಧಿಕಾರ ಸ್ವೀಕರಿಸಿದ ರಾಹುಲ್ ಪಾಂಡೆ ಹಾಗೂ ಅವರ ಧರ್ಮಪತ್ನಿ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ ಬೇಟಿ ನೀಡಿ, ಆಂಜನೇಯನ ದರ್ಶನ ಪಡೆದಿದ್ದಾರೆ..!

ಖಾಸಗಿಯಾಗಿ ಭೇಟಿ ನೀಡಿದ ರಾಹುಲ್ ಪಾಂಡೆ ದಂಪತಿ ಹಂಪಿ ಪ್ರಾಕೃತಿಕ ಪರಿಸರಕ್ಕೆ ಮಾರುಹೋಗಿ ದಂಪತಿಗಳಿಬ್ಬರು ಪರ್ವತದ ಮೇಲ್ಭಾಗದಲ್ಲಿನ ಕಲ್ಲು ಬಂಡೆ ಮೇಲೆ ನಿಂತು ಸೆಲ್ಫಿಗೆ ಮುಂದಾಗಿರುವ ಫೋಟೋ ಸೇರಿದಂತೆ ಇನ್ನಿತರ ಫೋಟೋಗಳು ಮತ್ತು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸಾಕಷ್ಟು ಸದ್ದು ಮಾಡುತ್ತಿದೆ..!?