ಮುಖ್ಯಾಧಿಕಾರಿ ಗೈರು ಹಾಜರಿಗೆ ಸದಸ್ಯರು ಗರಂ..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಸತತ ಗೈರು ಹಾಜರಿ ಆಗುತ್ತಿರುವ ಕಾರಣಕ್ಕಾಗಿ ಮುಖ್ಯಾಧಿಕಾರಿ ಬದಲಾವಣೆಗೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದ ಪ್ರಸಂಗವು ಜರುಗಿತು..!

ಕುಷ್ಟಗಿ ಪಟ್ಟಣದ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ನಿರಂತರವಾಗಿ ಮುಖ್ಯಾಧಿಕಾರಿ ಬುಡ್ಡಪ್ಪ ಬಂಡಿವಡ್ಡರ್ ಅನಾರೋಗ್ಯ ಕಾರಣದಿಂದ ಸತತವಾಗಿ ಗೈರಾಗುವ ಕಾರಣಗಳಿಂದ ಬೇರೊಬ್ಬ ಅಧಿಕಾರಿಯನ್ನು ತಕ್ಷಣ ನಿಯೋಜಿಸಲು ಸರ್ವ ಸದಸ್ಯರು ಸಮ್ಮತಿಸಿದ ಪ್ರಸಂಗ ಜರುಗಿತು. ಅಧಿಕಾರಿ ಗೈರಾಗುವುದರಿಂದ ಕಡತವಿಲೇವಾರಿ ಸೇರಿದಂತೆ ಆಡಳಿತದಲ್ಲಿನ ದೋಷಗಳು ಚರ್ಚೆಗೆ ಬಂದವು. ಪಟ್ಟಣದಲ್ಲಿ ಒಂದು ಗುಂಟೆಯಿಂದ ನಾಲ್ಕು ಗುಂಟೆಗಳವರೆಗೆ ಬಿನಶೇತ್ಗಿಗಾಗಿ ಎನ್.ಓ.ಸಿ ಪರವಾನಿಗೆ ನೀಡಬಾರದೆಂದು ಕೆಲ ಸದಸ್ಯರು ಸಭೆಗೆ ಒತ್ತಡ ತಂದರು. ಸೇಫ್ಟಿ ಟ್ಯಾಂಕ್ ವಾಹನವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಟೆಂಡರ್ ಕರೆಯುವಂತೆ ಸಭೆಯಲ್ಲಿ ಚರ್ಚೆ ನಡೆಸಲಾಗಿತು. ಅಧ್ಯಕ್ಷ ಜಿ.ಕೆ.ಹಿರೇಮಠ ಸೇರಿದಂತೆ ಉಪಾಧ್ಯಕ್ಷೆ ಹನುಮವ್ವ ಕೊರಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ್ ಪತ್ತಾರ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿ ಚಿರಂಜೀವಿ ದೊಡ್ಡಮನಿ ಅವರು 2022-2023 ಸಾಲಿನ ಜಮಾ ಕರ್ಚು ವರದಿಯನ್ನು ಸಭೆಗೆ ಮಂಡಿಸಿದರು. ಪಟ್ಟಣದ ಕೆಲ ಭಾಗಗಳಲ್ಲಿ ಪೈಪ ಲೈನ್ ಅಳವಡಿಕೆಗೆ ಅಗೆದ ಸಿ.ಸಿ ರಸ್ತೆಯನ್ನು ಮರು ನಿರ್ಮಿಸಲು ಒತ್ತಾಯಿಸಲಾಗಿತು..!!