ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕೊಪ್ಪಳ ಜಿಲ್ಲೆ ಉದಯವಾಗಿ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಮ್ಮಿಕೊಳ್ಳುವ ‘ಕೊಪ್ಪಳ ಜಿಲ್ಲಾ ರಜತ ಮಹೋತ್ಸವ’ ಕಾರ್ಯಕ್ರಮವು ಜಿಲ್ಲಾ ಉದಯಕ್ಕೆ ಕಾರಣವಾದ ಆಗಿನ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲರನ್ನ ಶಾಶ್ವತವಾಗಿ ನೆನಪಿಡುವಂತಾಗಬೇಕು ಎಂಬುದು ಜಿಲ್ಲೆಗರ ಆಶಯ..!

ಕೊಪ್ಪಳ ಜಿಲ್ಲಾ ರಜತ ಮಹೋತ್ಸವ
ಅಖಂಡ ರಾಯಚೂರು ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ‘ಕೊಪ್ಪಳ ಜಿಲ್ಲಾ’ ಉದಯವಾಗಬೇಕು ಎಂಬ ಬಹು ವರ್ಷಗಳ ಆಗಿನ ಜಿಲ್ಲಾ ಹೋರಾಟಗಾರರ ಕನಸಿಗೆ ಕಾರಣಿಭೂತರಾದ ಧೀಮಂತ ರಾಜಕಾರಣಿ ದಿವಂಗತ ಜೆ.ಹೆಚ್ ಪಟೇಲ ಅವರ ಹೆಸರು ಅಚ್ಚಳಿಯದಂತೆ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಉಳಿಯಬೇಕಾದರೇ.. ಅವರ ಮೂರ್ತಿ ಪ್ರತಿಷ್ಠಾನ ಸೇರಿದಂತೆ ಕನಿಷ್ಠ ಒಂದು ವೃತ್ತಕ್ಕೆ ಆದರೂ ಅವರ ಹೆಸರು ಅಥವಾ ಬಹು ದೊಡ್ಡ ಕಟ್ಟಡಕ್ಕೆ ಜೆ.ಹೆಚ್ ಪಟೇಲರ ನಾಮಕರವಾದಾಗ ಅವರ ಮಹತ್ವರವಾದ ಕಾರ್ಯಕ್ಕೆ ಒಂದು ಮೆರಗು ಬಂದಂತಾಗುತ್ತದೆ ಎಂಬುದು ಆಗಿನ ಜಿಲ್ಲಾ ಹೋರಾಟಗಾರರ ಬೇಡಿಕೆಯಲ್ಲಿ ಒಂದಾಗಿದೆ. ಈ ಸದ್ಯ ಕೇವಲ ಜಿಪಂ ಸಭಾಂಗಣವೊಂದಕ್ಕೆ ಮಾತ್ರ ಅವರ ಹೆಸರಿಟ್ಟಿರುವುದನ್ನು ಬಿಟ್ಟರೆ ಸಾಲದು, ಎಂಬ ಅಪಸ್ವರ ಕೂಡಾ ಅಲ್ಲಲ್ಲಿ ಕೇಳಿ ಬರುತ್ತಿದೆ. ರಜತ ಮಹೋತ್ಸವ ಕಾರ್ಯಕ್ರಮಕ್ಕೂ ಮೊದಲು ಜಿಲ್ಲೆಯ ಮಹತ್ವದ ಕಟ್ಟಡಕ್ಕಾದರೂ ಪಟೇಲರ ಹೆಸರನ್ನು ನಾಮಕರಣಗೊಳಿಸಿ, ಅವರ ಹೆಸರನ್ನು ಚಿರಸ್ಮರಣೀಯವಾಗಿ ಉಳಿಸುವ ಮೂಲಕ ಜಿಲ್ಲಾ ಉದಯಕ್ಕೆ ಕಾರಣವಾಗಿರುವ ಮಹನೀಯರನ್ನು ನೆನೆದರೇ.. ಜಿಲ್ಲೆಗೆ 25 ವರ್ಷಗಳು ತುಂಬಿರುವ ರಜತ ಮಹೋತ್ಸವ ಸಂಭ್ರಮಕ್ಕೊಂದು ಅರ್ಥ ಬರುತ್ತದೆ ಅಲ್ಲವೇ..!?
( ಮುಂದುವರೆಯುವುದು … )
