ಯಶಸ್ವಿಯಾಗಿ ಜರುಗಿದ ಅಚನೂರು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾ ರಥೋತ್ಸವ..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಇತಿಹಾಸ ಪ್ರಸಿದ್ಧಿ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಬಳಿಯ ಸುಕ್ಷೇತ್ರ ಅಚನೂರು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವ ಸಹಸ್ರಾರು ಭಕ್ತ ಸಾಗರದ ನಡುವೆ ಶನಿವಾರ ಸಂಜೆ ಭಕ್ತಿ ಸಂಭ್ರಮದಿಂದ ಜರುಗಿತು.!

ಬೆಳಿಗ್ಗೆ ದೇವಸ್ಥಾನದಲ್ಲಿ ಈಶ್ವರ ಲಿಂಗು ಸ್ವರೂಪ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಪಂಚಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಅಚನೂರು ಸಮೀಪದ ಭೀಮನಗಡ ಗ್ರಾಮದಿಂದ ಗ್ರಾಮಸ್ಥರು ಸಕಲ ವಾದ್ಯಮೇಳದೊಂದಿಗೆ ತೇರಿನ ಹಗ್ಗವನ್ನು ಮೆರವಣಿಗೆ ಮೂಲಕ ತರಲಾಗಿತು.
ಸಂಜೆ 5 ಗಂಟೆ ಸುಮಾರಿಗೆ ವಿವಿಧ ಮಠಾಧೀಶರು ಹಾಗೂ ತಾಲೂಕಿನ ಜನಪ್ರತಿನಿಧಿಗಳು ಹಾಗೂ ನಿಲೋಗಲ್ ಗ್ರಾಮದ ಗಣ್ಯರು ಸಮ್ಮುಖದಲ್ಲಿ ರಥೋತ್ಸವ ಚಾಲನೆ ದೊರಕಿತು.

ನಿಲೋಗಲ್ ಗ್ರಾಮ ಸೇರಿದಂತೆ ಜಿಲ್ಲೆಯ ಮತ್ತು ಬಾಗಲಕೋಟೆ, ಗದಗ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಮತ್ತು ನವ ದಂಪತಿಗಳು ರಥಕ್ಕೆ ಬಾಳೆಹಣ್ಣು ಉತ್ತತ್ತಿ ಎಸೆದು ರಥೋತ್ಸವ ಕಣ್ತುಂಬಿಕೊಂಡರು.

ಜಾತ್ರೆ ನಿಮಿತ್ಯ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ದೇವಸ್ಥಾನ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ..!!