ಬಿಳೇಕಲ್ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಜಾಥಾ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಳೇಕಲ್ ಗ್ರಾಮದಲ್ಲಿ ನಿಲೋಗಲ್ ‘ದಿ ವಿಜಡಮ್ ಶಾಲಾ’ ಮಕ್ಕಳಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತು..!

ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಅಭಿವೃದ್ಧಿ ಪರ ಘೋಷಣೆಗಳನ್ನು ಮೊಳಗಿಸಿದರು. ಪ್ರಮುಖವಾಗಿ ಗ್ರಾಮದ ಸ್ವಚ್ಛತೆ, ನೀರಿನ ಬಳಕೆ, ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ ತಡೆಗಟ್ಟುವುದು,
ಬಾಲ ಕಾರ್ಮಿಕ ಮತ್ತು ಕೂಲಿಗಾಗಿ ಗುಳೆ ತಪ್ಪಿಸುವುದು, ಕಸದ ತೊಟ್ಟೆ ಬಳಕೆ,
ಕಡ್ಡಾಯವಾಗಿ ಶೌಚಾಲಯ ನಿರ್ಮಾಣದ ಜೊತೆಗೆ ಬಳಕೆಗೆ ಸೂಚನೆ, ಪರಿಸರ ಸಂರಕ್ಷಣೆ, ಹೆಣ್ಣು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿವಹಿವುದರ ಕುರಿತು ಮನವರಿಕೆ ಮಾಡಲಾಗಿತು. ದಿ ವಿಜಡಮ್ ಶಾಲೆ ಕಾರ್ಯದರ್ಶಿ ಶಂಭು ಹಿರೇಮಠ, ಮುಖ್ಯಶಿಕ್ಷಕ ಗುರು ಅಂಗಡಿ, ಶಿಕ್ಷಕರಾದ ಮಹೇಶ್ ಗಟ್ಟಿ,
ಲಕ್ಷ್ಮೀ ಕುರಟ್ಟಿ, ಶಶಿಕಲಾ ಹಿರೇಮಠ,
ರೇಷ್ಮಾ ಭಾಗವಾನ, ಆಫ್ರಿನ ಮುಚಾಲಿ,
ರಾಜಮ್ ಯಾದವಾಡ, ಚಂದ್ರಶೇಖರ ಯಲಿಗಾರ, ಫಕೀರಪ್ಪ ಮಂಡಗಿ
ರಾಮಣ್ಣ ಕುರಿ ಸೇರಿದಂತೆ ಶರಣಪ್ಪ ತಳವಾರ ಮತ್ತು ಪರಶು ಮಲ್ಲಾಪುರ ಇನ್ನಿತರರು ಉಪಸ್ಥಿತರಿದ್ದರು..!!