ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲಾ ಉದಯಕ್ಕೆ ಕಾರಣಿಕರ್ತರಾದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್ ಪಟೇಲರ ಕುಟುಂಬಸ್ಥರನ್ನು ‘ಕೊಪ್ಪಳ ಜಿಲ್ಲಾ ರಜತ ಮಹೋತ್ಸವ’ ಕಾರ್ಯಕ್ರಮದಲ್ಲಿ ಕನಿಷ್ಟಪಕ್ಷ ಸತ್ಕರಿಸಿ, ಗೌರವಿಸಬೇಕಾಗಿದೆ ಎಂಬುದು ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಅಲ್ಲದೆ, ಜಿಲ್ಲೆಯಲ್ಲಿನ ಅವರ ಅಭಿಮಾನಿಗಳ ಒಕ್ಕೊರಲಿನ ಒತ್ತಾಯವಾಗಿದೆ..!
(ಲೋಹಿಯಾ ಸಿದ್ಧಾಂತದ ದಿವಂಗತ ಜೆ.ಹೆಚ್ ಪಟೇಲರೊಂದಿಗೆ ಮಾಜಿ ಸಿಎಂ ದಿವಂಗತ ರಾಮಕೃಷ್ಣ ಹೆಗಡೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರು)
ಜೆ.ಹೆಚ್ ಪಟೇಲರು ಬದುಕಿದ್ದರೇ.. ಆ ಮಾತು ಬೇರೆ ಎಂಬ ಮಾತುಗಳನ್ನಾಡುವ ಜಿಲ್ಲೆಗರು, ಅವರ ಸ್ಮರಣೆ ಜೊತೆಗೆ ಅವರ ಮಗ ಮಾಜಿ ಶಾಸಕ ಹಾಗೂ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲರು ಅಲ್ಲದೆ, ಜೆ.ಹೆಚ್ ಅವರ ಧರ್ಮಪತ್ನಿ ಸರ್ವಮಂಗಳ ಪಟೇಲ್ ಮತ್ತು ಕುಟುಂಬಸ್ಥರನ್ನು ಕರೆಯಿಸಿ, ಅವರನ್ನ ಸನ್ಮಾನಿಸಿ ಗೌರವಿಸುವುದು ಧರ್ಮ ಎಂಬ ಅಭಿಪ್ರಾಯಗಳು ಜಿಲ್ಲೆಯಲ್ಲಿ ಕೇಳಿ ಬಂದಿವೆ. ಜೆ.ಹೆಚ್ ಪಟೇಲರ ಕಾಲದ ಬಹುತೇಕ ಜಿಲ್ಲೆಯ ರಾಜಕೀಯ ಒಡನಾಡಿಗಳು ಈಗ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿದ್ದಾರೆ. ಆದರೆ, ತಮ್ಮ ಪಕ್ಷದ ಸಿದ್ಧಾಂತಗಳನ್ನು ಬದಿಗೊತ್ತಿ ಪ್ರತ್ಯೇಕ ಜಿಲ್ಲಾ ಕೇಂದ್ರಕ್ಕೆ ಆಸಕ್ತಿವಹಿಸಿದ ಮಹಾನ್ ನಾಯಕನ (ಜೆ.ಹೆಚ್ ಪಟೇಲ್) ಕುಟುಂಬಸ್ಥರನ್ನು ಕರೆಯಿಸಿ, ಬೆಳ್ಳಿ ಸಂಭ್ರಮದ ಬೃಹತ್ ಸಮಾರಂಭದಲ್ಲಿ ಆ ಕುಟುಂಬಕ್ಕೆ ತೊರುವ ಪ್ರೀತಿಯಿಂದಾದರೂ ಜೆ.ಹೆಚ್ ಪಟೇಲರ ಆತ್ಮಕ್ಕೆ ಶಾಂತಿ ದೊರಕಿದಂತಾಗುತ್ತದೆ ಎಂಬುದು ನಮ್ಮ ಆಶಯ ಕೂಡಾ ಒಂದಾಗಿದೆ..!!