ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕೊಪ್ಪಳ ಜಿಲ್ಲಾ ೧೨ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶುಭ ಕೋರಿದ್ದಾರೆ..!
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಗೆ ಶುಭ ಕೋರಿದರು ಎಂಬ ಇತ್ಯಾದಿಗಳ ಬಗ್ಗೆ ನಿಮಗೆ (ಓದುಗ ದೊರೆಗಳಿಗೆ) ಆಶ್ಚರ್ಯವಾಗಿರಬಹುದು ಇದು ಸತ್ಯ.. ರೀ ಅದು ಹೇಗೆ ಅಂದರೆ.. ಜಿಲ್ಲೆಯ ಹನುಮಸಾಗರದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ೧೨ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಉದಯಶಂಕರ ಪುರಾಣಿಕ ಅವರು ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದ ಆರಂಭದಲ್ಲಿಯೇ ತಾವು ಈ ಸದ್ಯ ಸೇವೆ ಸಲ್ಲಿಸುತ್ತಿದ್ದ ದೇಶದ ಪ್ರಧಾನ ಮಂತ್ರಿಗಳ “ಅಟಲಜೀ ಮಾಹಿತಿ ತಂತ್ರಜ್ಞಾನ” ಕೇಂದ್ರದಿಂದ ರಜೆ ಪಡೆಯಬೇಕಾದರೆ.. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಅನುಮತಿ ಪಡೆಯಲೇಬೇಕು. ರಜೆ ಇತ್ಯಾದಿಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಲೇಬೇಕು ಎಂದು ಹೇಳುವುದರ ಜೊತೆಗೆ ಸ್ವತಃ ನರೇಂದ್ರ ಮೋದಿ ಅವರು ನಾನು ಭಾಗವಹಿಸುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಮೋದಿ ಅವರು ಶುಭ ಕೋರಿದ್ದಾರೆ ಎಂದು ಸಭೆಗೆ ಸ್ಪಷ್ಟಪಡಿಸಿದರು. ಜೊತೆಗೆ ಕನ್ನಡ ತಂತ್ರಜ್ಞಾನದ ಬೆಳವಣಿಗೆ ನಡೆದಿದೆ. ತಂತ್ರಜ್ಞಾನದ ಶಿಕ್ಷಣ ಕನ್ನಡದಲ್ಲಿ ಲಭ್ಯವಾಗಬೇಕು. ಅದು ಶೀಘ್ರದಲ್ಲೇ ಆಗುತ್ತದೆ ಎಂಬ ಭರವಸೆವ್ಯಕ್ತಡಿಸಿದರು..!!