ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಖ್ಯಾತ ಪತ್ರಕರ್ತ ದಿವಂಗತ ಪಿ.ಲಂಕೇಶ್ ಅವರ ಗದ್ಯವನ್ನು ಸಂಭಂದಿಸಿದ ಸಮಿತಿ ಪಠ್ಯದಿಂದ ಕಿತ್ತು ಹಾಕಬಾರದಿತ್ತು. ಅವಶ್ಯವಿದ್ದರೆ.. ಪಾಠವನ್ನು ತಿದ್ದುಪಡಿಮಾಡಬಹುದಿತ್ತು ಎಂದು ಕನ್ನಡ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿ ಡಾ.ದೇವೇಂದ್ರಪ್ಪ ಜಾಜಿ ಅಭಿಪ್ರಾಯವ್ಯಕ್ತಪಡಿಸಿದರು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಏರ್ಪಡಿಸಿದ್ದ ಕೊಪ್ಪಳ ಜಿಲ್ಲಾ ೧೨ ನೇ ಸಾಹಿತ್ಯ ಸಮ್ಮೇಳನದಲ್ಲಿನ ‘ಹೊಸ ಶಿಕ್ಷಣ ನೀತಿ ಒಂದು ಅವಲೋಕನ’ ಎಂಬ ಮೊದಲ ಗೋಷ್ಠಿಯಲ್ಲಿ ‘ಹೊಸ ಶಿಕ್ಷಣ ನೀತಿ ಮತ್ತು ಮಾತೃ ಭಾಷೆ’ ವಿಷಯದ ಕುರಿತು ಮಾತನಾಡುವಾಗ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿವಿ ಪತ್ರಕರ್ತ ಪಿ.ಲಂಕೇಶ ಅವರ ಪಠ್ಯವನ್ನು ಕಿತ್ತು ಹಾಕಬಾರದಿತ್ತು. ಅದರಲ್ಲಿ ಕೆಲ ಭಾಗಗಳನ್ನು ತೆಗೆಯುವ ಮೂಲಕ ಸರಳಿಕರಣಗೊಳಿಸಬಹುದಾಗಿತ್ತು. ಹದಿ ಹರಿಯದವರ ಕುರಿತಾಗಿರುವ ಸಂದೇಶದ ಭಾಗ ತೆಗೆಯಬೇಕಾಗಿತ್ತು. ಆದರೆ, ಲಂಕೇಶ ಅವರ ಬೋಧನೆಗೆ ಬಹಳಷ್ಟು ಯೋಗ್ಯವಾದ ಸಾಹಿತ್ಯ ಸಂದೇಶ ಹೊರಗುಳಿದಂತಾಗಿದೆ ಎಂದು ವಿಷಾಧವ್ಯಕ್ತಪಡಿಸಿದರು. ನೂತನ ಶಿಕ್ಷಣ ಪದ್ಧತಿ ಅಧ್ಯಾಪಕರ ಸೃಜನಶೀಲತೆ ಕೊಲ್ಲುತ್ತದೆ. ಐಚ್ಛಿಕ ಭಾಷೆ ಜೊತೆಗೆ ಕನ್ನಡವನ್ನು ಎರಡು ವಿಷಯಗಳಲ್ಲಿ ಅಧ್ಯಯನ ಮಾಡಲು ಹೊಸ ಶಿಕ್ಷಣ ಪದ್ಧತಿಯಲ್ಲಿ ಅವಕಾಶವಿದೆ ಎಂದರು.
ಹೊಸ ಶಿಕ್ಷಣ ಪದ್ಧತಿಯ ಕುರಿತು ಕೆಲವರಿಗೆ ಆಳವಾದ ಅರಿವು ಇಲ್ಲದಂತಾಗಿದೆ ಎಂದು ಇನ್ನೋರ್ವ ಪ್ರಾಧ್ಯಾಪಕ ಪವನಕುಮಾರ ಗುಂಡೂರು ಅವರು ‘ಶಿಕ್ಷಣ ಮತ್ತು ಸಾಹಿತ್ಯ’ ಎಂಬ ವಿಷಯದ ಮೇಲೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಬೋಧನೆ ಮಾಡುವಂತವರಿಗೆ ನೂತನ ಪದ್ಧತಿ ಗೊಂದಲಕ್ಕೆ ಕಾರಣವಾಗಿದೆ. ಈ ವಿನೂತನ ಪದ್ಧತಿ ಹೊಣೆಗಾರಿಕೆ ಅಧ್ಯಾಪಕರ ಮೇಲಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಹೊಸ ಶಿಕ್ಷಣ ಪದ್ಧತಿಯಲ್ಲಿ ಮುಕ್ತ ಅವಕಾಶವಿದೆ ಎಂಬ ಸಂದೇಶ ನೀಡಿದರು. ಪ್ರಾಧ್ಯಾಪಕ ಶರಣಬಸಪ್ಪ ಬಿಳೆಎಲೆ ಮಾತನಾಡಿದರು. ಬಳ್ಳಾರಿ ವಿವಿ ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ ಶಿವಾನಂದ ಆಶಯ ನುಡಿದರು. ವಿಶ್ರಾಂತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಗೋಷ್ಠಿ ಅಧ್ಯಕ್ಷತೆವಹಿಸಿ ಹೊಸ ಶಿಕ್ಷಣ ಪದ್ಧತಿಗಿಂತ ಹಳೆ ಪದ್ಧತಿ ಅಂದರೇ.. ಬ್ರಿಟಿಷ್ ಮೇಕಾಲೆ ಶಿಕ್ಷಣ ಪದ್ಧತಿ ಸೇರಿದಂತೆ ಇನ್ನಿತರ ಶಿಕ್ಷಣ ಪದ್ಧತಿಗಳ ಸ್ವಯಂ ಹೇರಿಕೆಯಿಂದಾದ ಅಪಾಯಗಳನ್ನು ಬಿಚ್ಚಿಟ್ಟರು..!!