ಬೆಂಕಿಗೆ ಆಹುತಿಯಾದ ಜಾನುವಾರುಗಳು..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಜಮೀನಿನಲ್ಲಿ ಆಕಸ್ಮಿಕ ಬೆಂಕಿಗೆ ಎರಡು ಆಕಳು ಆಹುತಿಯಾದರೆ, ನಾಲ್ಕು ಜಾನುವಾರುಗಳು ಬೆಂಕಿಯಿಂದ ತೀವ್ರ ಗಾಯಗೊಂಡಿರುವ ಘಟನೆ ಜರುಗಿದೆ..!

ಜಾನುವಾರುಗಳು ಸೇರಿದಂತೆ ದವಸ, ದಾನ್ಯಗಳು, ಕೃಷಿ ಪರಿಕರಗಳು ಸುಟ್ಟು ಕರಕುಲಾಗಿವೆ. ಲಕ್ಷಾಂತರ ರೂಪಾಯಿಗಳ ಮೌಲ್ಯದ ಜಾನುವಾರುಗಳನ್ನು ಕಳೆದುಕೊಂಡಿರುವ ರಾಮಪ್ಪ ಶೇಷಪ್ಪ ಕುರಿ ಕುಟುಂಬಕ್ಕೆ ಏನು ದೊಚದಂತಾಗಿದೆ. ತನಗಿದ್ದ ಜಾನುವಾರುಗಳನ್ನು ಕಳೆದಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಸರಕಾರವನ್ನು ಒತ್ತಾಯಿಸಿದ್ದಾರೆ..!!