ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನಡೆದಿರುವ ಕೊಪ್ಪಳ ಜಿಲ್ಲಾ ೧೨ ನೇ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ ಅವರು ಏಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲವೆಂದು ಇಡೀ ಸಮ್ಮೇಳನದಲ್ಲಿ ಭಾಗವಹಿಸಿದ ಎರಡು ಅಂಕಿ ಜನರಲ್ಲಿ ಕೆಲವರು ಮಾತನಾಡಿದ್ದು ಕೇಳಿ ಬಂದಿತು..!
ಮೊದಲನೇ ದಿನ ಊಟದ ಅವ್ಯವಸ್ಥೆಯ ಆಗರವಾಗಿತ್ತು. ಅಲ್ಲದೆ, ಸ್ವತಃ ಸ್ಥಳೀಯರಿಗೆ ಮಾಹಿತಿ ಇಲ್ಲವೆಂದು ಕೆಲವರು ಮಾತನಾಡಿಕೊಂಡರು. ಮೊದಲ ದಿನದ ಗೋಷ್ಠಿಯಲ್ಲಿ ಮೇಲೆ ಕುಳಿತವರಿಗಿಂತ ಮುಂದೆ ಕುಳಿತವರ ಸಂಖ್ಯೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಂಡ ಕಸಾಪ ಅಜೀವ ಸದಸ್ಯರು ಸಮ್ಮೇಳನದ ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರ ಕಾರ್ಯವೈಖರಿ ಬಗ್ಗೆ ವಿರೋಧವ್ಯಕ್ತಪಡಿಸಿದರು..!!