ನಗು ಆರೋಗ್ಯಕ್ಕೆ ದಿವ್ಯ ಔಷಧಿ : ಡಾ.ಜೀವನಸಾಬ್ ಬಿನ್ನಾಳ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ನಿಯಮಿತ ನಗು ಆರೋಗ್ಯಕ್ಕೆ ದಿವ್ಯ ಔಷಧಿ ಇದ್ದಂತೆ ಎಂದು ಖ್ಯಾತ ಹಾಸ್ಯ ಕಲಾವಿದ ಡಾ.ಜೀವನಸಾಬ್ ಬಿನ್ನಾಳ ಅವರು ಅಭಿಪ್ರಾಯವ್ಯಕ್ತಪಡಿಸಿದರು..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಏರ್ಪಡಿಸಿದ್ದ ಕೊಪ್ಪಳ ಜಿಲ್ಲಾ ೧೨ ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಬಳಿಕ ‘ನಗೋಣ ಬನ್ನಿ’ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ನೂರಾರು ಹಾಸ್ಯ ಚಟಾಕೆಗಳ ಮೂಲಕ ನೆರೆದಿದ್ದವರನ್ನು ನಗೆಯಲ್ಲಿ ತೆಲಿಸಿದರು. ಹಾಸ್ಯಗಳ ಮೂಲಕ ಸಮಾಜದಲ್ಲಿನ ಅನಕ್ಷರತೆ ಬದುಕಿನ ಬುತ್ತಿ ಬಿಚ್ಚಿಟ್ಟರು. ಅಲ್ಲದೆ, ಹಲಗೆ ರೂಪದ ತಮ್ಮ ಕಂಠದ ಜಾನಪದ ಹಾಡುಗಳ ಮೂಲಕ ಇಡೀ ಸಭೆ ಪಿನ್ ಡ್ರಾಪ್ ಸೈಲಂಟಾಗಿದ್ದು ವಿಶೇಷ. ಜೊತೆಗೆ ಮುಂಬರುವ ದಿನಗಳಲ್ಲಿ ಸಮ್ಮೇಳನಗಳು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ವ್ಯವಸ್ಥೆ ಆಗಬೇಕೆಂದು ಸಂಘಟಕರಿಗೆ ಒತ್ತಾಯಿಸಿದರು..!!