ಕೃಷಿ ಪ್ರಿಯ ನ್ಯೂಸ್ |
ಶರಣಪ್ಪ ಕುಂಬಾರ
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸಮೀಪದ ನಿಲೋಗಲ್ ಶ್ರೀ ಮಲ್ಲಿಕಾರ್ಜುನ ರಥೋತ್ಸವಕ್ಕೆ ಆಗಮಿಸಿದ ವ್ಯಕ್ತಿವೊಬ್ಬ ಪಕ್ಕದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜರುಗಿದೆ..!
ದಿನಾಂಕ 4-3-2023 ರಂದು ರಥೋತ್ಸವಕ್ಕೆ ಆಗಮಿಸಿದ ನಿಲೋಗಲ್ ಗ್ರಾಮದ ಷಣ್ಮುಖಪ್ಪ ಚಿಕನಾಳ (55) ಎಂಬಾತ ಅಂದೇ.. ದೇವಸ್ಥಾನದ ಪಕ್ಕದ ಕೆರೆಯಲ್ಲಿ ಕಾಲು ಜಾರಿ ಮುಳುಗಿದ್ದಾನೆ. ದಿನಾಂಕ 7-3-2023 ರಂದು ಶವವಾಗಿ ತೆಲಾಡುತ್ತಿರುವುದನ್ನು ಗಮನಿಸಿದ ಇಲ್ಲಿನವರು ಶವ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..!!