ಪೊಲೀಸ್ ಎಂದು ಹೇಳಿ ಮಾಂಗಲ್ಯ ಸರ ಕದ್ದ ಅಂತರರಾಜ್ಯ ಕಳ್ಳನ ಬಂಧನ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದಲ್ಲಿ ಇತ್ತೀಚಿಗೆ ಪೊಲೀಸ್ ಎಂದು ಸುಳ್ಳು ಹೇಳಿ ಮೊಸಗೊಳಿಸಿ, ಮಹಿಳೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದ ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ..!

ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಗುಂತಕಲ್ ಪಟ್ಟಣದ ನಿವಾಸಿ ಸಯ್ಯದ್ ಅಬುಅಲಿ ತಂದೆ ಮೈಮೂದ್ ಅಲಿ (39) ಬಂಧಿತ ಆರೋಪಿ. ಗಂಗಾವತಿ ಡಿವೈಎಸ್ ಪಿ ಶೇಖರಪ್ಪ ನೇತೃತ್ವದ ಸಿಪಿಐ ಎ.ಎಸ್.ಗುದಿಗೊಪ್ಪ, ಪಿಎಸ್ ಐ ಕಾಮಣ್ಣ, ಸಿಬ್ಬಂದಿ ಚಿರಂಜೀವಿ, ವಿಶ್ವನಾಥ, ಮರಿಶಾಂತಗೌಡ, ರಾಘವೇಂದ್ರ ಹಾಗೂ ಪರಸಪ್ಪ ಪೊಲೀಸರ ತಂಡ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 2 ಲಕ್ಷ ರೂಪಾಯಿಗಳ ಮೌಲ್ಯದ 45.850 ಗ್ರಾಂ ಬಂಗಾರವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!