ಎಪ್ರಿಲ್ ಮೊದಲ ಭಾನುವಾರ ‘ಭೂ ವಿಜ್ಞಾನಿಗಳ’ ದಿನ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಇವತ್ತು 02-04-2023 ಅನ್ನು ಭೂವಿಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ..!

ಎಪ್ರಿಲ್ ಮೊದಲ ರವಿವಾರ ದಿನವನ್ನು ಭೂವಿಜ್ಞಾನಿಗಳ ದಿನ ಎಂದು ಪರಿಗಣಿಸಲಾಗುತ್ತಿದೆ. ಆರಂಭದಲ್ಲಿ ಸೋವಿಯತ್ ಒಕ್ಕೂಟದ ಭೂವಿಜ್ಞಾನಿಗಳು 1966 ರ ಎಪ್ರಿಲ್ ತಿಂಗಳಿನ ಮೊದಲ ಭಾನುವಾರವನ್ನು ಭೂವಿಜ್ಞಾನಿಗಳ ದಿನವನ್ನಾಗಿ ಆಚರಣೆಗೆ ಮುಂದಾಗಿ ಇತಿಹಾಸ ದಾಖಲಿಸಿದ್ದರು. ಖ್ಯಾತ ವಿಜ್ಞಾನಿ ‘ಅರಿಸ್ಟಾಟಲ್’ ಅವರನ್ನು ಭೂಮಂಡಲದ ಮೊದಲ ಭೂವಿಜ್ಞಾನಿ ಎಂದು ಕರೆಯಲಾಗುತ್ತಿದೆ. ಮುಂದುವರಿದ ದಿನಗಳಲ್ಲಿ ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳು ಭೂಮಿಯ ಭೌತಿಕ ಗುಣಲಕ್ಷಣಗಳನ್ನು ತನಿಖೆ ಮಾಡಲು ಆರಂಭಿಸಿದರು. ಇದಾದ ಬಳಿಕ ರೋಮನ್ನರು, ಅಮೃತಶಿಲೆಯನ್ನು ಹೇಗೆ ಗಣಿಗಾರಿಕೆ ಮಾಡಬೇಕೆಂದು ಅವಿಷ್ಕಾರಗೊಳಿಸಿದರು. ‘ಜೇಮ್ಸ್ ಹಟ್ಟನ್’ ಅವರನ್ನು ಆಧುನಿಕ ‘ಭೂವಿಜ್ಞಾನದ ಪಿತಾಮಹ’ ಎಂದು ಕರೆಯಲಾಗುತ್ತಿದೆ. ಇವರು ಖನಿಜಗಳು ಪ್ರಾಥಮಿಕವಾಗಿ ಎರಡು ಪ್ರಕ್ರಿಯೆಗಳಿಂದ ರೂಪಗೊಳ್ಳುತ್ತವೆ ಎಂದು ಸಾಭಿತುಪಡಿಸಿದರು. ಇಂತಹ ಮಹತ್ವದ ಭೂವಿಜ್ಞಾನಿಗಳು ಇಲ್ಲದಿದ್ದರೆ ಭೂಮಿಯ ಬಗ್ಗೆ ಯಾವುದೇ ಜ್ಞಾನ ಇರುತ್ತಿರಲಿಲ್ಲ. ವಿಶೇಷವಾಗಿ ಭಾರತದಲ್ಲಿ ಭೂವಿಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರ ಜೊತೆಗೆ ಭೂಮಿಯಲ್ಲಿನ ವಿವಿಧ ಖನಿಜಗಳ ಆವಿಷ್ಕಾರಗಳು ಜರುಗಬೇಕಾಗಿವೆ. ಅತ್ಯಂತ ಮಹತ್ವದ ಜವಾಬ್ದಾರಿ ಸ್ಥಾನದಲ್ಲಿರುವ ಭೂವಿಜ್ಞಾನಿಗಳ ದಿನದಂದು ಹಿರಿಯ, ಕಿರಿಯ ಭೂವಿಜ್ಞಾನಿಗಳಿಗೆ ನಮ್ಮೊದೊಂದು ಸಲಾಂ..!!

ಭೂವಿಜ್ಞಾನಿಗಳ ದಿನಾಚರಣೆ

2022 ರಂದು ಎಪ್ರಿಲ್ 3 ರಂದು ಭಾನುವಾರ ಆಚರಿಸಲಾಗಿತ್ತು. 2023 ರ ಎಪ್ರಿಲ್ 2 ರಂದು ಆಚರಿಸಲಾಗುತ್ತದೆ. 2024 ರ ಎಪ್ರಿಲ್ 7 ರಂದು ಭಾನುವಾರ ಹಾಗೂ 2025 ರಂದು ಎಪ್ರಿಲ್ 6 ರಂದು ಭೂವಿಜ್ಞಾನಿಗಳ ದಿನ ಎಂದು ನಿಗದಿಪಡಿಸಲಾಗಿದೆ.