ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಆಸ್ತಿ ಖರೀದಿ ಮಾಡುವವರು ಇನ್ನೂ ಮನೆಯಲ್ಲಿಯೇ ಕುಳಿತು ಸಬ್ ರಿಜಿಸ್ಟರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು..!
ಜಮೀನು ಮತ್ತು ನಿವೇಶನಗಳ ಖರೀದಿ ಸೇರಿದಂತೆ ಇತ್ಯಾದಿ ಕಾರ್ಯಗಳಿಗೆ ಸಾರ್ವಜನಿಕರು ಸಬ್ ರಿಜಿಸ್ಟರ್ ಕಚೇರಿಗೆ ಅಲೆದಾಡುವುದು ಇನ್ನೂ ಮೇಲೆ ಕಡಿಮೆಯಾಗಲಿದೆ. ಇದಕ್ಕಾಗಿಯೇ ರಾಜ್ಯ ಸರಕಾರ ವಿನೂತನ ‘ಕಾವೇರಿ 2.0’ ಎಂಬ ತಂತ್ರಾಂಶ ಜಾರಿಗೆ ತಂದಿದೆ.
‘ಕಾವೇರಿ 2.0’ ಎಂಬ ವಿನೂತನ ತಂತ್ರಾಂಶಕ್ಕೆ ಭೇಟಿ ನೀಡಿ, ಖರೀದಿ ನೀಡುವ ವಿವಿಧ ದಾಖಲೆಗಳ ನಂಬರ್, ವಯಕ್ತಿಕ ವಿವರ, ಚೆಕ್ಕಬಂದಿ, ಅಳತೆ, ಮುಂದ್ರಾಂಕ ಶುಲ್ಕ ಪಾವತಿಸುವುದರ ಜೊತೆಗೆ ಇತ್ಯಾದಿಗಳ ಮಾಹಿತಿವೊಂದಿಗೆ ಲಾಗಿನ್ ಆದರೆ ಸಾಕು, ನಿಮಗೊಂದು ಅರ್ಜಿ ಸಂಖ್ಯೆ ಮತ್ತು ಕಚೇರಿ ‘ಸ್ಲಾಟ್’ ಸಿಗುತ್ತದೆ. ಅರ್ಜಿಯನ್ನು ಸಂಬಂಧಿಸಿದ ಸಬ್ ರಿಜಿಸ್ಟರ್ ಪರಿಶೀಲಿಸಲಾಗಿ ಮನವಿ ಅರ್ಜಿಗೆ ಒಪ್ಪಿಗೆ ನೀಡಿದ ಬಳಿಕ ಸಂಬಂಧಿಸಿದ ಸ್ಲಾಟ್ ನಲ್ಲಿ ಖರೀದಿ ದಿನಾಂಕ, ಸಮಯ ಇತ್ಯಾದಿ ಮಾಹಿತಿ ಲಭ್ಯವಾಗುತ್ತದೆ. ಮೂಲ ದಾಖಲಾತಿಗಳೊಂದಿಗೆ ಖರೀದಿ ಪತ್ರಗಳನ್ನು (ಮ್ಯಾನವಲ್) ಸಿದ್ಧಪಡಿಸಿಕೊಂಡು ಸಬ್ ಕಚೇರಿಗೆ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಹಾಜರಾದಾಗ ಮಾತ್ರ ಖರೀದಿ ಪತ್ರಗಳಿಗೆ ಮಾಮೂಲಿನಂತೆ ನೋಂದಣಿ ಪ್ರಕ್ರಿಯೆ ಜರಗುತ್ತದೆ. ನಿಗದಿಪಡಿಸಿದ ಅರ್ಧ ಗಂಟೆ ಸಮಯದೊಳಗೆ ರಿಜಿಸ್ಟರ್ ಕಚೇರಿಯಲ್ಲಿ ಖರೀದಿದಾರ, ಹಕ್ಕು ಪಡೆದುಕೊಳ್ಳುವವರು ಮತ್ತು ಸಹಮತ ಸೇರಿದಂತೆ ಸಾಕ್ಷಿದಾರರು ಹಾಜರಿದ್ದ ಪಕ್ಷದಲ್ಲಿ ಮಾತ್ರ ಖರೀದಿ ಪ್ರಕ್ರಿಯೆಗಳು ಸಾಧ್ಯವಾಗುತ್ತವೆ. ಮೇಲಿನ ಹಾಜರಾತಿಯಲ್ಲಿ ಯಾವುದಾದರೂ ಒಂದು ಗೈರಾದರೇ, ಮುಂದಿನ ಪಾಳೆಯಕ್ಕೆ ಸಬ್ ರಿಜಿಸ್ಟರ್ ಅವಕಾಶ ನೀಡುತ್ತಾರೆ ಎಂಬ ಮಾಹಿತಿ ಪಕ್ಕಾ ಆಗಿದೆ. ಖರೀದಿ, EC ಹಾಗೂ ಮದುವೆ ಕಾರ್ಯಗಳಿಗೆ ಮಾತ್ರ ಆನ್ ಲೈನ್ ಅರ್ಜಿ ವ್ಯವಸ್ಥೆ ಅತಿ ಶೀಘ್ರದಲ್ಲೇ ಜಾರಿಗೆ ಬರಲಿದೆ.
ಏಜೆಂಟರ ನಿಯಂತ್ರಣ : ಖರೀದಿಸಬಹುದಾದ ಆಸ್ತಿಗೆ ಪಾವತಿಸಬಹುದಾದ ನೋಂದಣಿ ಸೇರಿದಂತೆ ಇತ್ಯಾದಿ ಶುಲ್ಕಗಳು ಇಲಾಖೆ ವೆಬ್ ನಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿದಾರರಿಗೆ ಸ್ಪಷ್ಟವಾಗುತ್ತವೆ. ಅಲ್ಲದೆ, ಖರೀದಿದಾರ ಮತ್ತು ಖರೀದಿ ನೀಡುವರ ಮಧ್ಯದ ದಲ್ಲಾಳಿಗಳಿಗೆ ನೀಡುವ ಹಣ ನಿಯಂತ್ರಣವಾಗುತ್ತದೆ ಎಂಬುದು ಸರಕಾರದ ಮೊದಲ ಆಲೋಚನೆಯಾಗಿದೆ. ಇತ್ಯಾದಿ ಶುಲ್ಕಗಳಿಗಿಂತ ದಲ್ಲಾಳಿಗಳಿಗೆ ನೀಡುವ ದುಪ್ಪಟ್ಟು ಹಣ ಉಳಿತಾಯವಾಗುವುದು ಯೋಜನೆಯ ಮುಖ್ಯ ಉದ್ಧೇಶವಾಗಿದೆ. ಖರೀದಿ ವ್ಯವಹರಿಸುವವರು ನೇರವಾಗಿ ಸಬ್ ರಿಜಿಸ್ಟರ್ ಕಚೇರಿಗೆ ಲಿಂಕ್ ಬೆಳೆಯುವುದರಿಂದ ಫಲಾನುಭವಿಗಳಿಗೆ ಸಾಧ್ಯವಾದಷ್ಟು ಹಣ ಪೋಲಾಗುವುದು ತಪ್ಪಲಿದೆ.
ಪ್ರಾಯೋಗಿಕವಾಗಿ ಯಶಸ್ವಿ : ಚಿಂಚೋಳ್ಳಿ, ಬೆಳಗಾವಿ ಸೌತ್, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ 5 ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಈ ವಿನೂತನ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ಮೂಲಕ ಈ ವಿನೂತನ ಯೋಜನೆಯ ಸಾಧಕ ಬಾದಕಗಳನ್ನು ಮನಗಂಡ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈಗಾಗಲೇ ಯಶಸ್ಸು ಕಂಡಿದೆ. ಶೀಘ್ರದಲ್ಲೇ ರಾಜ್ಯದ ಎಲ್ಲಾ ರಿಜಿಸ್ಟರ್ ಕಚೇರಿಗಳಲ್ಲಿ ಈ ವಿನೂತನ ಯೋಜನೆ ಜಾರಿಗೆ ಬರಲಿದೆ. ಖರೀದಿದಾರ ಅಥವಾ ಫಲಾನುಭವಿ ಇಲಾಖೆ ತಂತ್ರಾಂಶಕ್ಕೆ ನೇರವಾಗಿ ಅರ್ಜಿ ಸಲ್ಲಿಸುವ ಮೂಲಕ ರಿಜಿಸ್ಟರ್ ಕಚೇರಿಗೆ ಹೆಚ್ಚು ಸಂಪರ್ಕಕ್ಕೆ ಬರುವುದರಿಂದ ರಾಜ್ಯ ಸರಕಾರದ ಈ ವಿನೂತನ ಮಹತ್ವಾಕಾಂಕ್ಷೆ ‘ಕಾವೇರಿ 2.0’ ಯೋಜನೆ ಶೀಘ್ರವೇ ಜನಪರವಾಗಲಿದೆ ಎಂಬುದು ನಮ್ಮ ಆಶಯ.
ಕುಷ್ಟಗಿಯಲ್ಲಿ ಜಾರಿ : ಕೊಪ್ಪಳ ಜಿಲ್ಲೆಯ ‘ಕುಷ್ಟಗಿ ಸಬ್ ರಿಜಿಸ್ಟರ್ ಕಚೇರಿ’ಯಲ್ಲಿ ಈ ವಿನೂತನ ತಂತ್ರಾಂಶ ಬಳಕೆ ಎಪ್ರಿಲ್ 27 ರಿಂದ ಜಾರಿಗೆ ಬರಲಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಇಲ್ಲಿನ ಸಬ್ ರಿಜಿಸ್ಟರ್ ಭರತೇಶ ಎಸ್ ಪಾಟೀಲ ಅವರು ‘ಕೃಷಿ ಪ್ರಿಯ’ ಪತ್ರಿಕೆಗೆ ಸ್ಪಷ್ಟಪಡಿಸಿದರು..!!