ಲೋಕಾಯುಕ್ತ ಬಲೆಗೆ ಎಸ್.ಡಿ.ಎ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : 5 ಸಾವಿರ ರೂಪಾಯಿಗಳನ್ನು ಲಂಚವಾಗಿ ಸ್ವೀಕರಿಸಿದ ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ದ್ವೀತಿಯ ದರ್ಜೆ ಸಹಾಯಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ..!

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಯ ದ್ವೀತಿಯ ದರ್ಜೆ ಸಹಾಯಕ ವೆಂಕಟೇಶ ಸೋಮಪ್ಪ ಪೂಜಾರ ಬಲೆಗೆ ಬಿದ್ದ ನೌಕರ. ಇಲಾಖೆಯಿಂದ ನೀಡಲಾಗುವ 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ಮಂಜೂರಾತಿಗೆ ವೆಂಕಟೇಶ ಸೋಮಪ್ಪ ಪೂಜಾರ ಅವರು 5 ಸಾವಿರ ರೂಪಾಯಿಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಧ್ಯಾಹ್ನ ಸುಮಾರಿಗೆ ಹೊಸಪೇಟೆ ರಸ್ತೆಯ ಡಾಬಾ ಮುಂಭಾಗದಲ್ಲಿರುವ ಪಾನ್ ಶಾಪ್ ಹತ್ತಿರ ಫಲಾನುಭವಿಯಿಂದ ಲಂಚದ 5 ಸಾವಿರ ಹಣ ಪಡೆದುಕೊಂಡ ನೌಕರ ಲೋಕಾಯುಕ್ತ ಬಲೆಗೆ ಒಳಗಾಗಿದ್ದಾರೆ. ಆರೋಪಿ ನೌಕರರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಸಲೀಂಪಾಷಾ ಅವರ ಮಾರ್ಗದರ್ಶನದಲ್ಲಿ ಪಿ.ಐ ಸಂತೋಷ ರಾಠೋಡ, ಪಿ.ಐ ಗಿರೀಶ ರೋಡ್ಕರ್, ಪಿಐ ರಾಜೇಶ ಬಟಗುರ್ಕಿ, ಪಿ.ಐ ಚಂದ್ರಪ್ಪ ಈಟಿ. ಸಿಬ್ಬಂದಿಗಳಾದ ಸಿದ್ದಯ್ಯ, ಬಸವರಾಜ ಬೀಡನಾಳ, ರಾಜು, ರಾಮಣ್ಣ, ರಂಗನಾಥ, ನಾಗಪ್ಪ, ತಾರಾಮತಿ, ಶೈಲಜಾ, ಆನಂದಕುಮಾರ, ಗುರು ದೇಶಪಾಂಡೆ ಸೇರಿದಂತೆ ಸಿಬ್ಬಂದಿ ವರ್ಗವು ಯಶಸ್ವಿ ಟ್ರ್ಯಾಪ್ ನಲ್ಲಿ ಭಾಗವಹಿಸಿದ್ದಾರೆ..!!