ಆಕಸ್ಮಿಕ ಬೆಂಕಿಗೆ ಕಾರು ಆಹುತಿ

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಚಲಿಸುತ್ತಿದ್ದ ಕಾರೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ  ಜರುಗಿದೆ..!

ಆಂದ್ರ ಮೂಲದ ಲಕ್ಕಿಂಟಿವಾರಿ ರಾಮರೆಡ್ಡಿ ಎಂಬುವರಿಗೆ ಸೇರಿದ ಕಾರು ಇದಾಗಿದೆ. ಅಮರಗುಂಡಪ್ಪ ಪೆಟ್ರೋಲ್ ಬಂಕ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಈ ದುರ್ಘಟನೆ ಜರುಗಿದೆ. ತಮ್ಮ ಸ್ನೇಹಿತನೊಂದಿಗೆ ವಿಜಯಪುರದಿಂದ ಕಾರು ಚಲಾಯಿಸಿಕೊಂಡು ಬಂದ ಲಕ್ಕಿಂಟಿವಾರಿ ರಾಮರೆಡ್ಡಿ ಅವರು, ಊಟೋಪಹಾರ ಮಾಡಲು ಕುಷ್ಟಗಿ ಪಟ್ಟಣಕ್ಕೆ ಸರ್ವಿಸ್ ರಸ್ತೆ ಮೂಲಕ ಬರುವ ಸಂದರ್ಭದಲ್ಲಿ ಕಾರಿನ ಬಾನಟ್ ನಲ್ಲಿ ಸ್ಪಾರ್ಕ್ ಕಾಣಿಸಿಕೊಂಡಿದೆ. ಕಾರು ನಿಲ್ಲಿಸಿ ಬಾನಟ್ ತೆರೆದು ನೋಡುವ ಸಂದರ್ಭದಲ್ಲಿ ದಿಢೀರನೆ ಬೆಂಕಿ ಆವರಿಸಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಆಗಿಲ್ಲ ಎಂದು ತಿಳಿದುಬಂದಿದೆ..!!