ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಪಕ್ಷದಿಂದ ಈ ಬಾರಿ ಸ್ಪರ್ಧೆ ನೀಡುವುದು ‘ನವೀನ’ ಎಂದು ಕೇಳಿ ಬರುತ್ತಿದೆ..!?
ನವೀನ ಗುಳಗಣ್ಣನವರ ಹೆಸರು ಭಾರತೀಯ ಜನತಾ ಪಕ್ಷದ ಹೈಕಮಾಂಡನಲ್ಲಿ ಮುಂಚೂಣಿಯಲ್ಲಿರುವುದು ಕೇಳಿಬರುತ್ತಿದೆ. ಸಂಘ ಪರಿವಾರದಲ್ಲಿ ಅಷ್ಟೇ ಅಲ್ಲದೆ, ಪಕ್ಷ ಸಂಘಟನೆಯಲ್ಲಿ ನವೀನ ಗುಳಗಣ್ಣನವರ ಎಂಬ ಯುವ ನಾಯಕನ ಹೆಸರು ಬಾರಿ ಸದ್ದು ಮಾಡುತ್ತಿದೆ.
ಕಳೆದ 2018 ರ ಚುನಾವಣೆಯಿಂದ ಸಂಘಟನೆಯ ಮೂಲಕ, ಅತಿ ಹೆಚ್ಚು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ನವೀನ ಕ್ಷೇತ್ರದವರ ಪಾಲಿಗೆ ಬಹಳಷ್ಟು ಚಿರಪರಿಚಿತರಾಗಿದ್ದಾರೆ. ಅದರ ಅಷ್ಟೆ, ಈ ಬಾರಿಯ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಇವರೊಬ್ಬ ಪ್ರಮುಖರು. ಭೂತಮಟ್ಟದ ಕಾರ್ಯಕರ್ತರಿಂದ ಹಿಡಿದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರುಗಳ ಲಿಂಕ್ ನಲ್ಲಿರುವ ನವೀನ ಅವರು ಪಕ್ಷದ ನಾಯಕರೊಂದಿಗೆ ಬಹಳಷ್ಟು ಒಡನಾಡಿಯಾಗಿದ್ದಾರೆ. ಕೇವಲ ಒಂದೇ ಬಣದೊಂದಿಗೆ ಗುರುತಿಸಿಕೊಳ್ಳದ ಇವರು ಪಕ್ಷದ ಶಿಸ್ತಿನ ಸಿಪಾಯಿ. ಬಿಜೆಪಿಯು ಟಿಕೆಟ್ ಹಂಚಿಕೆ ವಿಚಾರದಲ್ಲಿ ಈ ಬಾರಿ ಯುವಕರಿಗೆ ಮಣಿಹಾಕುವುದಾದರೆ ನವೀನ ಗುಳಗಣ್ಣನವರಿಗೆ ಟಿಕೇಟ್ ಫಿಕ್ಸ್ ಎಂಬ ಮಾತುಗಳು ಕೂಡಾ ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿವೆ. ಅಂದುಕೊಂಡಂತೆ ಕೆಸರಿ ಪಡೆ ಬಹಳಷ್ಟು ಕ್ರಿಯಾಶೀಲ ಯುವ ನಾಯಕ ನವೀನ ಗುಳಗಣ್ಣನವರ ಅವರಿಗೆ ಮಣಿ ಹಾಕಿದ್ದಾದರೆ ಯಲಬುರ್ಗಾ ಕ್ಷೇತ್ರದಲ್ಲಿ ಈ ಭಾರಿ ಎಲ್ಲವೂ “ನವೀನ” ಆಗಲಿದಿಯಾ ಎಂಬ ಮುಂಗಡ ಮಾತುಗಳು ಕೂಡಾ ಕೇಳಿಬರುತ್ತಿವೆ..!!
ನವೀನ ಪರಿಚಯ : ಯಲಬುರ್ಗಾ ಕ್ಷೇತ್ರಕ್ಕೆ ಬಿಜೆಪಿ ಪರಿಚಯಿಸುವ ಮೂಲಕ ಮೊಟ್ಟ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದ ಕೀರ್ತಿ ಮಾಜಿ ಶಾಸಕ ದಿ.ಈಶಣ್ಣ ಗುಳಗಣ್ಣನವರಿಗೆ ಸಲ್ಲುತ್ತದೆ. ಕ್ಷೇತ್ರದಲ್ಲಿ ದಾಖಲೆ ಗೆಲುವು ಸಾಧಿಸಿ ಎದುರಾಳಿಗಳಿಗೆ ಶಾಕ್ ನೀಡಿದ್ದ ಈಶಣ್ಣ ಅವರ ಪುತ್ರನೇ ಈ ನವೀನ ಗುಳಗಣ್ಣನವರ. ಅಲ್ಲದೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗಂಗಮ್ಮ ಅವರ ಪುತ್ರ. ಈ ಸಧ್ಯ ಕೊಪ್ಪಳ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ..!