ಸದ್ದಿಲ್ಲದೆ ಮತದಾನ ಜಾಗೃತಿ ಮೂಡಿಸುತ್ತಿರುವ ವೈದ್ಯ..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕಡ್ಡಾಯ ಮತದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಇಲ್ಲಿನ ಖಾಸಗಿ ವೈದ್ಯರೊಬ್ಬರು ಸದ್ದಿಲ್ಲದೆ ಸುದ್ದಿಯಾಗುತ್ತಿದ್ದಾರೆ..!

ಇಂತಹ ವಿಶಿಷ್ಟ ವೈದ್ಯ ಬೇರೆ ಯಾರು ಅಲ್ಲ ಕುಷ್ಟಗಿ ಪಟ್ಟಣದ ಖಾಸಗಿ ವೈದ್ಯ ಡಾ.ರವಿಕುಮಾರ ದಾನಿ. ಸದಾ ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದ್ದ ಡಾ. ದಾನಿ ಅವರು ಕುಷ್ಟಗಿ ಜನತೆಗೆ ಬಹಳಷ್ಟು ಅಚ್ಚುಮೆಚ್ಚು. ಇಂತಹ ವಿಶಿಷ್ಟ ವ್ಯಕ್ತಿಯು 2023 ರ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಹೆಚ್ಚಾಗಬೇಕು. ಮತದಾನದ ಪಟ್ಟಿಯಲ್ಲಿರುವ ಎಲ್ಲರೂ ಕಡ್ಡಾಯವಾಗಿ ಮತದಾನಕ್ಕೆ ಮುಂದಾಗಬೇಕು. ಅಲ್ಲದೆ, ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂಬ ಮಹದಾಸೆಯ ದೃಷ್ಟಿಕೊನವಿಟ್ಟುಕೊಂಡು ತಮ್ಮ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಚಿಕಿತ್ಸೆ ನೀಡಿದ ಬಳಿಕ, ಔಷಧ ಬಳಕೆಯ ವಿಧಾನ ತಿಳಿಸಿ, ತಾವು ಈ ಬಾರಿಯ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನಮಾಡಬೇಕು. ತಾವು ಸೇರಿದಂತೆ ತಮ್ಮ ಕುಟುಂಬದ ಎಲ್ಲಾ ಸದಸ್ಯರು ಮತದಾನದಿಂದ ದೂರ ಉಳಿಯದಂತೆ ರೋಗಿಗಳಿಗೆ ಹಾಗೂ ಅವರ ಹಿಂಬಾಲಕರಿಗೆ ಸಲಹೆ, ಸೂಚನೆ ನೀಡುವ ಈ ವಿಶಿಷ್ಟ ವೈದ್ಯರ ಮಹತ್ವರ ಕಾರ್ಯಕ್ಕೆ ಕುಷ್ಟಗಿ ಪಟ್ಟಣ ಸೇರಿದಂತೆ ಈ ಭಾಗದವರು ಇವರಲ್ಲಿನ ಪ್ರಜಾಪ್ರಭುತ್ವ ಆಶಯಗಳನ್ನು ಕೊಂಡಾಡುತ್ತಿದ್ದಾರೆ. ವೈದ್ಯರ ಆಶಯದಂತೆ ನಾವೆಲ್ಲರೂ ಕಡ್ಡಾಯವಾಗಿ ಮತದಾನಮಾಡಬೇಕಾಗಿದೆ ಎಂಬುದು ಕೃಷಿ ಪ್ರಿಯ ಪತ್ರಿಕೆ ಆಶಯು ಕೂಡಾ ಹೌದು..!!