ಗ್ವಾತಗಿ ಮರಿಯಪ್ಪ ‘ಕೈ’ ಬಿಡುವುದು ಗ್ಯಾರಂಟಿ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಮುಖಂಡ ಮರಿಯಪ್ಪ ಗ್ವಾತಗಿ ಅತಿ ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷ ತ್ಯಜಿಸುವುದು ಪಕ್ಕಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ..!

ಕಾಂಗ್ರೆಸ್ ಪಕ್ಷದ ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಹನುಮನಾಳ ಭಾಗದ ಮುಖಂಡ ಮರಿಯಪ್ಪ ಗ್ವಾತಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಮುಖಂಡರೊಂದಿಗೆ ಬಹಳಷ್ಟು ಅಂತರ ಕಾಯ್ದುಕೊಳ್ಳುವ ಮೂಲಕ ಪಕ್ಷದ ಯಾವುದೇ ಸಭೆ ಮತ್ತು ಸಮಾರಂಭಗಳಲ್ಲಿ ಮರಿಯಪ್ಪ ಕಾಣಿಸಿಕೊಂಡಿದ್ದಿಲ್ಲ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಪಕ್ಷಾಂತರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸೂಕ್ತ ಸ್ಥಾನಮಾನದ ಜೊತೆಗೆ ಜಿಪಂ ಟಿಕೇಟ್ ಮುಂದಿಟ್ಟ ಬೇಡಿಕೆಯನ್ನು ಸಾರಾಸಗಟವಾಗಿ ನಿರಾಕರಿಸಿದ್ದು ಪಕ್ಷಾಂತರಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಈ ಭಾಗದ ಹಲವು ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಅಪಾರ ಜನ ಕಾರ್ಯಕರ್ತರೊಂದಿಗೆ ಕೇಸರಿ ಪಡೆ ಸೇರಲು ವೇದಿಕೆ ಸಿದ್ಧವಾಗಿರುವುದು ಕೂಡಾ ಈ ಭಾಗದಲ್ಲಿ ಗುಟ್ಟಾಗಿ ಉಳಿದಿಲ್ಲ. ಸಾಲು ಸಾಲು ಕಾಂಗ್ರೆಸ್ ಪಕ್ಷದ ನಾಯಕರು ಪಕ್ಷ ಬಿಟ್ಟು ವಿಧಾನಸಭೆ ಚುನಾವಣೆ ಮತದಾನದ ಸಮೀಪದಲ್ಲಿ ಬಿಜೆಪಿ ಸೇರ್ಪಡೆ ಕ್ಷೇತ್ರದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ..!!