ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಮಾಜಿ ಸಂಸದ ಹಾಗೂ ಕುಷ್ಟಗಿ ಅಸೆಂಬ್ಲಿ ಉಸ್ತುವಾರಿ ಆಗಿರುವ ಡಾ.ಜಿ.ವಿವೇಕವೆಂಕಟಸ್ವಾಮಿ ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಕೈಗೊಳ್ಳುವ ಮೂಲಕ ಪಕ್ಷ ಸಂಘಟನೆಗೆ ಮುಂದಾದರು..!
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಮನೆ ಮನೆಗೂ ಭೇಟಿ ನೀಡುವ ಮೂಲಕ ಪ್ರತಿವೊಬ್ಬ ಮತದಾರರಿಗೆ ಮನವರಿಕೆ ಮಾಡಿಕೊಡುವಂತೆ ಸಲಹೆ ನೀಡಿದರು. ಡಬಲ್ ಇಂಜಿನ್ ಸರಕಾರದ ಮಹತ್ವ ತಿಳಿಹೇಳುವುದರ ಜೊತೆಗೆ ಲಾಭ ನಷ್ಟದ ಕುರಿತು ತಿಳಿಸಲು ಸೂಚನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತ ಕಾರ್ಯವೈಖರಿ ಬಗ್ಗೆ ಹೆಮ್ಮೆವ್ಯಕ್ತಪಡಿಸಿದರು. ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಂಪರ್ಕಿಸುವ ಮೂಲಕ ಚುನಾವಣೆಯಲ್ಲಿ ಪಕ್ಷ ನಿಷ್ಠಾವಂತರಾಗುವಂತೆ ಹುರುಪು ತುಂಬಿದ ಪ್ರಸಂಗ ಜರುಗಿತು. ಕುಷ್ಟಗಿಯ ವೀರೇಶ ಬಂಗಾರಶೆಟ್ಟರ್, ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಕಂಚೇರ, ಮಾಜಿ ಸದಸ್ಯ ಸುರೇಶ ಬೇನಾಳ, ಬೂತ ಸಮಿತಿ ಅಧ್ಯಕ್ಷ ಶರಣಪ್ಪ ಬಸಪ್ಪ ಕುಂಬಾರ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಿದ್ದು ರೊಟ್ಟಿ, ಮುಖಂಡರಾದ ವೀರಣ್ಣ ಗಜೇಂದ್ರಗಡ, ಶಿವಪ್ಪ ಕುಂಬಾರ, ಉಮೇಶ, ತಿಪ್ಪನಗೌಡ ಪಾಟೀಲ, ಗಣೇಶ ಕುಂಬಾರ, ನಿಂಗಪ್ಪ ಕುರುಮನಾಳ, ರಾಜು ಪವಾರ, ಹೊನ್ನಪ್ಪ ಸಾಂತಗೇರಿ, ಪ್ರಶಾಂತ ನಂದಿಹಾಳ, ಶರಣಪ್ಪ ರೊಟ್ಟಿ, ಬಸವರಾಜ ಮಣ್ಣೂರು, ಪರಮೇಶ್ವರ ವೀ ಚಕ್ರಸಾಲಿ, ಸಂತೋಷ ತಳವಾರ, ಕಿರಣ ಗಜೇಂದ್ರಗಡ ಸೇರಿದಂತೆ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು..!!