ಸಿದ್ದು ಸಿಎಂ : ನಿಜವಾಯ್ತು ಸಿದ್ಧನಕೊಳ್ಳದ ಶ್ರೀಗಳ ವಾಣಿ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಬಾಗಲಕೋಟೆ (ಕೊಪ್ಪಳ) : ಸಿದ್ಧರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂಬುದು ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಸಿದ್ಧನಕೊಳ್ಳ ಮಠದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳು ನುಡಿದ ಭವಿಷ್ಯ ವಾಣಿ ನಿಜವಾಗಿದೆ..!

ಬಾದಾಮಿಯಲ್ಲಿ ಕಳೆದ ಎಂಟು ತಿಂಗಳ ಹಿಂದೆ ಜರುಗಿದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಾನಿಧ್ಯವಹಿಸಿದ್ದ ಡಾ. ಶಿವಕುಮಾರ ಮಹಾಸ್ವಾಮಿಗಳು, ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಗಲಿದ್ದಾರೆ ಯಾವುದೇ, ಸಂಶಯ ಬೇಡವೆಂದು ಸ್ವತಃ ಸಿದ್ಧರಾಮಯ್ಯನವರಿಗೆ ಆಶೀರ್ವಾದ ಮಾಡುವ ಮೂಲಕ ಶ್ರೀಗಳು ಭವಿಷ್ಯವಾಣಿ ನುಡಿದಿದ್ದರು. ಶ್ರೀಗಳ ವಾಣಿಯಂತೆ ದಿನಾಂಕ 20-05-2023 ರಂದು ಸಿದ್ಧರಾಮಯ್ಯನವರು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಮಠದಲ್ಲಿ ಅಮವಾಸ್ಯೆ ದಿನದಂದು ನೆರೆದಿದ್ದ ಸಾವಿರಾರು ಭಕ್ತರು ‘ಸಿದ್ದು ಸಿಎಂ’ ಶ್ರೀಗಳ ವಾಣಿ ಕುರಿತು ಬಹಳಷ್ಟು ಚರ್ಚೆ ನಡೆಸಿದ್ದು ಕೂಡಾ ವಿಶೇಷವಾಗಿತ್ತು. ಪೂಜ್ಯಶ್ರೀಗಳ ಎಂಟು ತಿಂಗಳ ಹಿಂದಿನ ವಾಣಿಯ ಕುರಿತು ಸ್ವತಃ ಸಿದ್ದು ಅಭಿಮಾನಿಗಳು ಮಠಕ್ಕೆ ಆಗಮಿಸಿ, ತಮ್ಮ ನಾಯಕನ ಅಧಿಕಾರದ ಗದ್ದುಗೆ ಏರಲಿರುವ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು ಮಠದ ಮೇಲಿನ ಪ್ರೀತಿಗೆ ಮತ್ತಷ್ಟು ಮೆರಗು ತಂದಿತು. ಕಲಾ ಪೋಷಕ ಮಠ ಎಂತಲೇ ಖ್ಯಾತಿಯ ಸಿದ್ಧನಕೊಳ್ಳದ ಮಠ ಹಾಗೂ ಇಲ್ಲಿನ ಪೂಜ್ಯಶ್ರೀಗಳ ವಾಣಿ ಬಗ್ಗೆ ಈ ಭಾಗದವರು ಬಹಳಷ್ಟು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ..!!