ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕ್ಷುಲ್ಲಕ ಕಾರಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಡ್ರೈವರ್ ಹಾಗೂ ಕಂಡಕ್ಟರ್ ಪ್ಯಾಸೆಂಜರ್ ನಡುವೆ ಕಲಹ ಉಂಟಾಗಿ ರಕ್ತ ಗಾಯಗಳಾದ ಘಟನೆ ಜಿಲ್ಲೆಯ ಕುಷ್ಟಗಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಭವಿಸಿದೆ.!
ಕುಷ್ಟಗಿ ಡಿಪೋದಲ್ಲಿ ಕಂಡಕ್ಟರ್ ಸೇವೆ ಸಲ್ಲಿಸುತ್ತಿರುವ ಮುತ್ತಣ್ಣ ಪೂಜಾರ ಮತ್ತು ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿರುವ ಬಸ್ಸಯ್ಯ ದೇವನೂರಮಠ ಮತ್ತೊಬ್ಬ ಪ್ಯಾಸೆಂಜರ್ ಗಾಯಗೊಂಡ ವ್ಯಕ್ತಿಗಳು.
ಇಳಕಲ್’ ಟು ಕುಷ್ಟಗಿ ಬಸ್ ದೋಟಿಹಾಳ ಮಾರ್ಗವಾಗಿ ಬೆಳಿಗ್ಗೆ ಕುಷ್ಟಗಿ ಕಡೆಗೆ ಬರುವ ಸಂದರ್ಭದಲ್ಲಿ ದೋಟಿಹಾಳ ನಿಲ್ದಾಣದಲ್ಲಿ ಪ್ಯಾಸೆಂಜರ್ ಒಬ್ಬರು ಹನ್ನೆರಡು ವರ್ಷದ ಮಗನೊಂದಿಗೆ ಬಸ್ ಹತ್ತಿದ್ದು, ಪ್ಯಾಸೆಂಜರ್ ಬಳಿ ಮಗನ ಪೂರ್ಣ ಟಿಕೇಟ್ ಪಡೆಯುವಂತೆ ಡ್ರೈವರ್ ಕೋರಿದ್ದಾರೆ. ಅದಕ್ಕೊಪ್ಪ ಪ್ಯಾಸೆಂಜರ್ ಡ್ರೈವರ್ ಜೊತೆಗೆ ಮಾತಿನ ಚಕಮಕಿ ನಡೆದಿದ್ದು, ಕುಷ್ಟಗಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದೆ, ಈ ಜಗಳದಲ್ಲಿ ಪ್ಯಾಸೆಂಜರ್ ಹಾಗೂ ಕಂಡಕ್ಟರ್ ತಲೆಗೆ ರಕ್ತಗಾಯವಾಗಿದೆ. ಡ್ರೈವರ್ ಕಣ್ಣಿಗೆ ಕೈಗೆ ಪೆಟ್ಟುಗಳಾಗಿವೆ. ಸಧ್ಯ ಈ ಘಟನೆ ಕುಷ್ಟಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.!!