ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಮನ್ನಾಪೂರು ಗ್ರಾಮದ ಶ್ರೀ ಗವಿಸಿದ್ಧೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಗಿತು..!
ನಾಟಿ ಮಾಡಿದ ತೆಂಗಿನ ಗಿಡವೊಂದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಅವರು ನೀರು ಹಾಕುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಪ್ರತಿ ಶಾಲೆಗಳ ವಾತಾವರಣ ಹಚ್ಚು ಹಸಿರಿನಿಂದ ಕೂಡಿರಬೇಕು. ಇದಕ್ಕೆ ಮುಖ್ಯಸ್ಥರು ಸಹಕಾರ ನೀಡಬೇಕೆಂದರು. ಶಾಲೆಯೊಂದರಲ್ಲಿನ ಉತ್ತಮ ಪರಿಸರವು ಆ ಶಾಲೆಯ ಫಲಿತಾಂಶದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಕಾಂಬ್ಳೆ ಅವರು ಅಭಿಪ್ರಾಯವ್ಯಕ್ತಪಡಿಸಿದರು. ಸಂಸ್ಥೆ ಅಧ್ಯಕ್ಷ ಮಂಜುನಾಥ ಪಾಟೀಲ, ಕಾರ್ಯದರ್ಶಿ ಬಿ.ಎಸ್.ಹಿರೇಮಠ, ಕಾರ್ಯಧ್ಯಕ್ಷ ವೀರೇಶ ಸೂಡಿ, ದೇವಪ್ಪ ಗಂಗನಾಳ, ಬಸವರಾಜ ಮೆಳ್ಳಿ, ಮಲ್ಲಯ್ಯ ಹಿರೇಮಠ, ವಿಜಯಕುಮಾರ ಕಟ್ಟಿಮನಿ, ಮುಖ್ಯಗುರು ಎಸ್.ಬಿ.ಕಡೇಮನಿ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಬಳೇಗಾರ, ಜಂಟಿ ನಿರ್ದೇಶಕರು ವಿಜಯಕುಮಾರ, ಬಿಸಿಯೂಟ ತಾಲೂಕಾಧಿಕಾರಿ ಶರಣಪ್ಪ, ಖಾಸಗಿ ಗಾಳಿ ವಿದ್ಯುತ್ ತಯಾರಿಕೆ ಘಟಕದ ಮುಖ್ಯಸ್ಥರು ಮಲ್ಲಿಕಾರ್ಜುನ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿ.ಎಸ್.ಕಾಡಗಿಮಠ, ಸಿಬ್ಬಂದಿ ಎಸ್.ವಾಯ್.ಕಂಚಿ, ಶಿವಾನಂದ ಹಿರೇಮಠ, ಸವಿತಾ ಹಿರೇಮಠ, ಚಿದಾನಂದ ಗಂಗನಾಳ, ಸಂತೋಷ ಗಂಜಿಹಾಳ, ಪ್ರಲ್ಹಾದ ದಾಸರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ನಿಡಶೇಸಿಯ ಹಿರೇಮಠದ ಕಿರಿಯ ಮಹಾಸ್ವಾಮಿಗಳಾದ ವಿಶ್ವಾರಾಧ್ಯ ಶ್ರೀಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವದಿಸಿದರು.
ಪ್ರತಿಭಾ ಪುರಸ್ಕಾರ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಅಮೃತ ಬಾಲಾಜಿ ಬಳೇಗಾರ, ಸೌಂದರ್ಯ ಹನುಮಂತ ಜಗ್ಗಲ, ಮಹ್ಮದ್ ರೀಯಾನ್ ಹಾಗೂ ಜ್ಯೋತಿ ಹಿರೇಕುರುಬರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗಿತು..!!