ಕೃಷಿ ಪ್ರಿಯ ನ್ಯೂಸ್ |
ಸಂಗಮೇಶ ಮುಶಿಗೇರಿ
ಕೊಪ್ಪಳ : ವಾಂತಿ ಬೇಧಿ ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರು ಭೇಟಿ ನೀಡಿ, ಪ್ರಕರಣ ಕುರಿತು ಮಾಹಿತಿ ಪಡೆದಿರುವ ಪ್ರಸಂಗ ಜರುಗಿತು..!
08-06-2023 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಗ್ರಾಮದ ಶಾಲೆಯೊಂದರಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ವಾಂತಿ ಬೇಧಿ ಪ್ರಕರಣಗಳ ಕುರಿತು. ಕಳೆದ ನಾಲ್ಕೈದು ದಿನಗಳಲ್ಲಿ ಹೊಸ ಪ್ರಕರಣಗಳು ಪತ್ತೆ ಕುರಿತು. ಹಳೇ ಪ್ರಕರಣಗಳ ಆರೋಗ್ಯ ಕುರಿತು. ಜೊತೆಗೆ ಗ್ರಾಮದ ಪ್ರತೀ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಜಾಗೃತಿ ಮೂಡಿಸುತ್ತಿರುವುದರ ಕುರಿತು. ಔಷದೋಪಚಾರ ಕುರಿತು ಮಾಹಿತಿ ಪಡೆದರು. ಬಳಿಕ ಕಾಯಿಲೆಗೆ ಒಳಗಾದವರಿಗೆ ಓಆರ್’ಎಸ್ ವಿತರಿಸುವಂತೆ ಹಾಗೂ ಪ್ರತಿದಿನ ಮನೆಮನೆಗಳಿಗೆ ಭೇಟಿ ನೀಡಿ, ಆರೋಗ್ಯ ಜಾಗೃತಿ ಜೊತೆಗೆ ಹೊಸ ಪ್ರಕರಣಗಳನ್ನು ಗಮನಿಸುವಂತೆ ಸೂಚಿಸಿದರು.
ಜೆಜೆಎಂ ಕಾಮಗಾರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿದರು. ನಾಳೆ ಡಿಬಿಒಟಿಯ ಎಲ್ಲಾ ಪೈಪ್ಲೈನ್’ಗಳು ಸಣ್ಣಪುಟ್ಟ ದುರಸ್ತಿಯಲ್ಲಿದ್ದರೆ ಸರಿಪಡಿಸಿ ನೀರು ಸರಬರಾಜು ಮಾಡಬೇಕು ಎಂದು ಸ್ಥಳದಲ್ಲಿದ್ದ ತಾಲೂಕು ಪಂಚಾಯಿತಿ ಇಓ ಶಿವಪ್ಪ ಸುಭೇದಾರ, ಪಿಡಿಓ ನಾಗೇಶ ಅವರಿಗೆ ಸೂಚಿಸಿದರು.
ವಾಂತಿ ಬೇಧಿ ಪ್ರಕರಣಗಳು ಸಂಪೂರ್ಣ ಕಡಿಮೆಯಾಗುವವರೆಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಇಬ್ಬರು ವೈದ್ಯರ ವ್ಯವಸ್ಥೆ ಮಾಡಿ ಎಂದು ಡಿಎಚ್’ಒ ಅಲಕಾನಂದ ಮಾಳಗಿ, ಟಿಎಚ್’ಓ ಡಾ.ಆನಂದ ಗೋಟೂರು ಅವರಿಗೆ ಸೂಚಿಸಿದರು. ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರ ರಾಘವೇಂದ್ರರಾವ್, ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು..!!