ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಜೆಸ್ಕಾಂ ಎಸ್.ಓ ರಶ್ಮಿ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆನಿರತ ಸಿಬ್ಬಂದಿ ಸಮ್ಮುಖದಲ್ಲಿಯೇ ಕಣ್ಣೀರ ಹಾಕಿರುವ ಪ್ರಸಂಗ ಜರುಗಿದೆ..!
ತಮ್ಮ ಸೆಕ್ಷನ್ ವ್ಯಾಪ್ತಿಗೆವೊಳಪಡುವ 48 ಗ್ರಾಮಗಳಿಗೆ ಕೇವಲ ಏಳು ಜನ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯ ಪಟ್ಟಣದಲ್ಲಿ ಕಾರ್ಯನಿರ್ವಹಿಸಲು ನಾಲ್ಕು ಜನ ಸಿಬ್ಬಂದಿ ಅವಶ್ಯಕತೆ ಇರುತ್ತದೆ. ಆದ್ರೆ, ಇಲ್ಲಿಯವರೆಗೂ ಸಿಬ್ಬಂದಿ ನೇಮಕವಾಗುತ್ತಿಲ್ಲವೆಂದು ರಶ್ಮಿ ಅವರು ಬೇಸರವ್ಯಕ್ತಪಡಿಸಿದರು. ಸಿಬ್ಬಂದಿ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು. ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರು ಕೂಡಾ ರಜೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಿ ಸೂಕ್ತ ಪರಿಹಾರ ಕೈಗೊಳ್ಳಬೇಕಾಗಿದೆ ಎಂದು ಮನನೊಂದ ಸಿಬ್ಬಂದಿವರ್ಗ ಪತ್ರಿಕೆಗೆ ಅಭಿಪ್ರಾಯ ಹಂಚಿಕೊಂಡರು..!!