ಕೃಷಿ ಪ್ರಿಯ ನ್ಯೂಸ್ |
ಶರಣಪ್ಪ ಕುಂಬಾರ
ಕೊಪ್ಪಳ : ಜಿಲ್ಲೆಯ ಪತ್ರಕರ್ತರು ಹಾಗೂ ಪೊಲೀಸರ ನಡುವೆ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಪ್ರಬಲ ಪೈಪೋಟಿ ಮಧ್ಯೆ ಜಿಲ್ಲೆಯ ಪತ್ರಕರ್ತರ ತಂಡಕ್ಕೆ ಜಯವಾಗಿದೆ..!
ಕೊಪ್ಪಳ ನಗರ ಸಮೀಪದ ಕಲ್ಯಾಣಿ ಸ್ಟೀಲ್ ಕಾರ್ಖಾನೆ ಆವರಣದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಪಂದ್ಯಾವಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಟಾಸ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಟಾಸ್ ಗೆದ್ದ ಪೊಲೀಸ್ ತಂಡದ ನಾಯಕ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದ್ದಾರೆ. ತೀವ್ರ ಪೈಪೋಟಿ ನಡುವೆ ಪೊಲೀಸರು ಪತ್ರಕರ್ತರ ಮೇಲೆ 8 ಓವರುಗಳಿಗೆ 84 ರನ್ನಗಳ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪತ್ರಕರ್ತರು ಕ್ಷೇತ್ರ ರಕ್ಷಣೆ ಜೊತೆಗೆ ಉತ್ತಮ ಪ್ರದರ್ಶನ ನೀಡುವ ಮೂಲಕ 7 ವಿಕೆಟಗಳ ಮೂಲಕ ಪತ್ರಕರ್ತರು ಜಯಸಾಧಿಸಿದ್ದಾರೆ. ಪತ್ರಕರ್ತ ಅತೀಕ ಅವರ 34 ರನ್ನಗಳು ಜಯಕ್ಕೆ ಕಾರಣವಾಗಿತು. ಜಯಶಾಲಿಯಾದ ಪತ್ರಕರ್ತರ ತಂಡಕ್ಕೆ ಎಸ್.ಪಿ ಯಶೋಧಾ ವಂಟಗೋಡಿ ಅವರು ಪಾರಿತೋಷಕ ನೀಡಿ, ಗೌರವಿಸಿದ್ದಾರೆ. ಡಿ.ವೈ.ಎಸ್.ಪಿ ಆರ್.ಎಸ್.ಉಜ್ಜನಕೊಪ್ಪ, ಸಿ.ಪಿ.ಐ ಮಹಾಂತೇಶ ಸಜ್ಜನ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸರು, ಪತ್ರಕರ್ತರು ಉಪಸ್ಥಿತರಿದ್ದರು..!!