ನವಜಾತ ಶಿಶು ಪತ್ತೆ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಡ್ಡದ ದೇವಲಾಪೂರ ಕ್ರಾಸ್ ಬಳಿ ಮೃತ ನವಜಾತ ಶಿಶುವೊಂದ ಪತ್ತೆಯಾಗಿದೆ..!

ಕ್ರಾಸ್ ಬಳಿಯಲ್ಲಿನ ಬಸ್ ನಿಲ್ದಾಣದ ಹಿಂಭಾಗದಲ್ಲಿ ಹಸುಳೆಯನ್ನು ಬೀಸಾಕಿದ್ದಾರೆ. ಬೆಳಗಿನ ಜಾವ ಬೀಸಾಕಿರಬಹುದು ಎಂದು ಗ್ರಾಮಸ್ಥರು ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಈ ರೀತಿಯಾಗಿ ಶಿಶುವೊಂದನ್ನು ಬೀಸಾಡಲು ಅನೈತಿಕ ಸಂಪರ್ಕ ಕಾರಣ ಎನ್ನುತ್ತಿದ್ದಾರೆ. ಗಂಡು ಶಿಶು ನೋಡಿದ ಎಲ್ಲರೂ ಮಮ್ಮನೆ ಮರಗುತ್ತಿದ್ದಾರೆ..!!