ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾದ ದೈಹಿಕ ಶಿಕ್ಷಣ ಶಿಕ್ಷಕ..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕ್ರಿಮಿನಾಶಕ ಸೇವಿಸಿ ದೈಹಿಕ ಶಿಕ್ಷಣ ಶಿಕ್ಷಕ ಸಾವಿಗೆ ಶರಣಾಗಿರುವ ಘಟನೆ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಜರುಗಿದೆ..!

ಕುಷ್ಟಗಿ ಪಟ್ಟಣದ ಬುತ್ತಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ರಾಜು ಬ್ಯಾಡಗಿ ಮೃತ ದೈಹಿಕ ಶಿಕ್ಷಣ ಶಿಕ್ಷಕ. ಕೊಲ್ಲಾಪುರ ಮೂಲದ ಎಂ.ಬಿ.ಬಿ. ಕಂಪನಿಯಲ್ಲಿ ಕಳೆದೊಂದು ಆರು ತಿಂಗಳಿನಿಂದ ಏಜೆಂಟಾಗಿ ಕೆಲಸ ನಿರ್ವಹಿಸಿದ್ದಾನೆ.
ಕಂಪನಿಯಲ್ಲಿ ಹಣ ಹೂಡಿದರೆ, ಆರು ತಿಂಗಳಲ್ಲಿ ಹಣ ದ್ವಿಗುಣವಾಗುತ್ತದೆ ಎಂದು ಸಾರ್ವಜನಿಕರನ್ನು ನಂಬಿಸಿ ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ, ಸಧ್ಯ ಕಂಪನಿ ಮುಚ್ಚಿದೆ ಎಂಬ ಸುದ್ದಿ ತಿಳಿದ ಸಾರ್ವಜನಿಕರು ಕಂಪನಿಯಲ್ಲಿ ಹೂಡಿದ ಹಣವನ್ನು ಮರಳಿ ನೀಡುವಂತೆ ರಾಜು ಬ್ಯಾಡಗಿ ಅವರಿಗೆ ಒತ್ತಡ ಹೇರಿದ್ದಾರೆ. ಒತ್ತಡ ತಾಳಲಾರದೇ ಶಿಕ್ಷಕ ರಾಜು ಬ್ಯಾಡಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಿಕ್ಷಕ ವಲಯದಲ್ಲಿ ಕೇಳಿ ಬರುತ್ತಿದೆ..!!

ಶಿಕ್ಷಕರು ಭಾಗಿ..? : ಹಣ ದ್ವಿಗುಣ, ಬಿಟ್ ಕ್ವಾಯಿನ್ ಸೇರಿದಂತೆ ಅನಧಿಕೃತ ಕಂಪನಿಗಳಲ್ಲಿ ಹೂಡಿಕೆ ಕ್ಷೇತ್ರಗಳಲ್ಲಿ ಸರಕಾರಿ ನೌಕರರು ಅದರಲ್ಲಿ ವಿಶೇಷವಾಗಿ ಕೆಲ ಶಿಕ್ಷಕರು ಭಾಗಿಯಾಗಿರುವುದು ಇತ್ತೀಚಿಗೆ ಸಾಕಷ್ಟು ಸುದ್ದಿ ಕೇಳಿ ಬರುತ್ತಿದೆ. ಸಮಾಜದಲ್ಲಿ ಪವಿತ್ರ ಗುರು ಸ್ಥಾನದಲ್ಲಿದ್ದುಕೊಂಡು ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದಿ, ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ತುಂಬ ಬೇಕಾದವರು ಈ ರೀತಿ ಅನಧಿಕೃತ ಕಂಪನಿಗಳಲ್ಲಿ ಶಿಕ್ಷಕರು ಭಾಗಿಯಾಗುವುದು ಅಕ್ಷಮ್ಯ ಅಪರಾದವಾಗಿದೆ. ಇದನ್ನು ತಿಳಿದಿರುವ ಶಿಕ್ಷಕರು ಹೆಚ್ಚು ಹೆಚ್ಚು ಭಾಗಿಯಾಗಿರುವುದು ಯಾವ ನ್ಯಾಯವೆಂದು ಬುದ್ದಿವಂತರು ಜಿಲ್ಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ..?